ವಿನೋದ್ ರಾಜ್ ಹೆಸರಲ್ಲಿ ನಕಲಿ‌ ಖಾತೆ…

Published on

372 Views
Advertisement

ನಟ ವಿನೋದ್ ರಾಜ್ ತಾಯಿ ಲೀಲಾವತಿ ಅವರೊಂದಿಗೆ ನೆಲಮಂಗಲದ ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿನೋದ್ ರಾಜ್ ತಾವಾಯಿತು, ತಮ್ಮ ಕೆಲಸವಾಯಿತು ಎಂದಿರುವ ವಿನೋದ್ ರಾಜ್‌ ಗೆ ಕಿಡಿಗೇಡಿಗಳು ಯಾರೋ ಸಮಸ್ಯೆ ಉಂಟು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಿಂದ ದೂರವಿರುವ ವಿನೋದ್ ರಾಜ್ ಕೃಷಿ ಹಾಗೂ ತಾಯಿಯೇ ಸರ್ವಸ್ವವೆಂದು ಬದುಕುತ್ತಿದ್ದಾರೆ. ಆದರೆ ಯಾರೊ ಕಿಡಿಗೇಡಿಗಳು ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾರೆ.

ವಿನೋದ್ ರಾಜ್ ಹೆಸರಲ್ಲಿ ಯಾರೊ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸಿನಿಮಾ ನಟ-ನಟಿಯರಿಗೆ ಸಂದೇಶಗಳನ್ನು ಕಳಿಸಿ, ಹಣ ಕೇಳುತ್ತಿದ್ದಾರಂತೆ.
ವಿಷಯ ಗೊತ್ತಾಗುತ್ತಿದ್ದಂತೆ ವಿನೋದ್ ರಾಜ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾನು ನನ್ನ ತಾಯಿ, ಹೊಲ, ತೋಟ, ಪರಿಸರ, ಆಸ್ಪತ್ರೆ, ಹಳ್ಳಿ ಎಂದುಕೊಂಡು ಇದ್ದೇವೆ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಯಾರೊ ನನ್ನ ಹೆಸರಲ್ಲಿ ಖಾತೆ ತೆರೆದು ಸಂದೇಶ ಕಳಿಸಿದ್ದಾರೆ ಎಂದು ನಟ ಸಾಯಿಪ್ರಕಾಶ್ ಕರೆ ಮಾಡಿ ಹೇಳಿದಾಗ ಗೊತ್ತಾಯಿತು’ ಎಂದಿದ್ದಾರೆ ವಿನೋದ್ ರಾಜ್.

Advertisement

ಕಲಾವಿದರಿಗೆ ಈ ರೀತಿ ಸಮಸ್ಯೆ ಕೊಡಬೇಡಿ, ಈ ರೀತಿ ಮಾಡಿ ಇನ್ನೊಬ್ಬರ ಹೆಸರಿಗೆ ಕೆಟ್ಟ ಹೆಸರು ತರಬೇಡಿ, ಮನೆ ಹಾಳುಮಾಡುವಂತ ಕೆಲಸ ಮಾಡಬೇಡಿ, ಈಗಾಗಲೇ ಸಾಕಷ್ಟು ಕಷ್ಟ ಕಂಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ, ಯಾರು ಈ ಕೆಲಸ ಮಾಡಿದ್ದಾರೊ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ ವಿನೋದ್ ರಾಜ್.
ನೆಲಮಂಗಲದ ಮೈಲನಹಳ್ಳಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿರುವ ವಿನೋದ್ ರಾಜ್, ಮುಖವಾಡ ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com