flixOye
Buzz

ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ…
ಕರ್ನಾಟಕದ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಹೊತ್ತಲ್ಲೇ ಚಂದವನದ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಂದ್ರಜಿತ್ ನಟಿಯರನ್ನಷ್ಟೇ ಅರೆಸ್ಟ್ ಮಾಡಿದ್ದೀರಿ, ನಟರನ್ನೇಕೆ ಬಿಟ್ರಿ, ಡ್ರಗ್ಸ್ ಕೇಸ್ನಲ್ಲಿ ನಟಿಯರಷ್ಟೇ ಅಲ್ಲ ನಟರೂ ಇದ್ದಾರೆ. ಹಿರಿಯ ನಿರ್ದೇಶಕರ ಮಕ್ಕಳು, ಇವೆಂಟ್ ಮ್ಯಾನೆಜ್ಮೆಂಟ್ ನಲ್ಲಿರುವವರು, ಅಲ್ಲದೆ ರಾಜಕಾರಣಿಗಳ ಮಕ್ಕಳಿಗೂ ಡ್ರಗ್ಸ್ ಲಿಂಕ್ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ಬರೀ ಇಬ್ಬರು ನಟಿಯರನ್ನು ಅರೆಸ್ಟ್ ಮಾಡಿದ್ದಾರೆ. ಬೇರು ಇಲ್ಲದವರನ್ನು ಕರೆತಂದು ನಾಮಕಾವಸ್ತೆ ತನಿಖೆ ಆಗ್ತಿದೆ ಎಂದು ಆರೋಪಿಸಿ, ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಇಂದ್ರಜಿತ್ ಒತ್ತಾಯ ಮಾಡಿದ್ದಾರೆ.

ಸಂಬಂಧಿತ · Related