ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ..!!

ಪಾನಿಪುರಿ ಕಿಟ್ಟಿ ಪ್ರಕರಣದಲ್ಲಿ ನಟ ದುನಿಯಾ ವಿಜಿ ಜೈಲುವಾಸ ಅನುಭವಿಸಿ, ನಂತರ ಜಾಮೀನು ಮೂಲಕ ಹೊರಬಂದಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ದುನಿಯಾ ವಿಜಿ ಮತ್ತೊಮ್ಮೆ ಪೋಲಿಸ್ ಠಾಣೆ ಮೆಟ್ಟೇಲೆರುವಂತಾಗಿದೆ. ದುನಿಯಾ ವಿಜಿ ಮಗಳು ಮೋನಿಕಾ ಗಿರಿನಗರ ಪೋಲೀಸ್ ಠಾಣೆಯಲ್ಲಿ ತಂದೆ ವಿರುದ್ಧ ದೂರು ನೀಡಿದ್ದಾಳೆ. ‘ನಾನು ಮನೆಗೆ ಹೋದಾಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾಳೆ. ದುನಿಯಾ ವಿಜಿ, ಕೀರ್ತಿ ಗೌಡ , ವಿಜಿ ಕಾರು ಡ್ರೈವರ್ ವಿರುದ್ಧ ದೂರು ನೀಡಿದ್ದಾಳೆ
Advertisement
Advertisement