flixOye
Buzz

ನಿರ್ದೇಶಕನಾದ ಕಾಮಿಡಿ ಕಿಲಾಡಿಗಳು ಲೋಕೇಶ್

ಕಿರುತೆರೆಯಲ್ಲಿ ಪ್ರಸಾರ ಕಂಡು ಕನ್ನಡಿಗರ ಮನಗೆದ್ದ ಕಾಮಿಡಿ
ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡು
ನಂತರ ಕೆಲವೊಂದು ಚಿತ್ರಗಳಲ್ಲಿ ಹಾಸ್ಯನಟನಾಗಿ ಕಾಣಿಸಿಕೊಂಡಿದ್ದ
ನಟ ಲೋಕೇಶ್ ಕುಮಾರ್ ಅವರು ಮೊದಲಬಾರಿಗೆ ಚಿತ್ರವೊಂದನ್ನು
ನಿರ್ದೇಶನ ಮಾಡುತ್ತಿದ್ದಾರೆ.

ಫೈಲ್ ನಂ 25 ಶೀರ್ಷಿಕೆಯ ಚಿತ್ರವೊಂದನ್ನು
ನಿರ್ದೇಶನ ಮಾಡುತ್ತಿರುವುದಾಗಿ ಲೋಕೇಶ್ ಅವರು ತಮ್ಮ ಫೇಸ್ ಬುಕ್
ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.


ಇದೊಂದು ಮಕ್ಕಳ ಚಿತ್ರವಾಗಿದ್ದು,
ನೈಜವಾಗಿ ನಡೆದಿರುವ ಘಟನೆಯನ್ನು ಆಧಾರಿತವಾಗಿಟ್ಟು ಕೊಂಡು ಕಥೆ
ಬರೆಯಲಾಗಿದ್ದು ಸ್ಪಾರ್ಕಲ್ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ
ಚಿತ್ರವು ನಿರ್ಮಾಣವಾಗಲಿದೆ. ಚಿತ್ರತಂಡ ಹಾಗೂ ಇನ್ನುಳಿದರ ಕಲಾವಿದರ
ವಿವರಗಳನ್ನು ಸದ್ಯದಲ್ಲೇ ನಿರ್ದೇಶಕ ಲೋಕೇಶ್ ಅವರು ತಿಳಿಸಲಿದ್ದಾರೆ.

ಸಂಬಂಧಿತ · Related