ಡಿಟೆಕ್ಟೀವ್ ತೀಕ್ಷ ಫಸ್ಟ್‌ಲುಕ್, ಮೋಷನ್ ಪೋಸ್ಟರ್ ಬಿಡುಗಡೆ

Published on

701 Views
Advertisement

ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ (ಪ್ಯಾನ್ ಇಂಡಿಯಾ) ಪ್ರಿಯಾಂಕಉಪೇಂದ್ರ ಅಭಿನಯದ 50ನೇ ಚಿತ್ರ ’ಡಿಟೆಕ್ಟೀವ್ ತೀಕ್ಷ’ ಎರಡು ನಿಮಿಷದ ಫಸ್ಟ್‌ಲುಕ್‌ನ್ನು ಪುತ್ರ ಆಯುಷ್‌ಉಪೇಂದ್ರ ಬಿಡುಗಡೆ ಮಾಡಿದರೆ, ರಿಯಲ್ ಸ್ಟಾರ್ ಉಪೇಂದ್ರ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಆಯುಷ್‌ಉಪೇಂದ್ರನ ಹುಟ್ಟಹಬ್ಬವನ್ನು ಆಚರಿಸಿಕೊಳ್ಳಲಾಯಿತು. ನಂತರ ಮಾತನಾಡಿದ ಉಪೇಂದ್ರ ಚಿತ್ರ 50, ವಯಸ್ಸು 20. ಎಷ್ಟು ಬೇಗ ಕಾಲ ಓಡುತ್ತಿದೆ ಅಂದ್ರೆ ಈಗಾಗಲೇ 50 ಮುಗಿಸಿದ್ದೀರಾ. ನಾನು 53 ಮುಗಿಸಿ 54ರಲ್ಲಿ ಇದ್ದೇನೆ. ನನಗಿಂತ ವೇಗವಾಗಿ ಹೋಗ್ತಿದ್ದೀರಾ. ಶೀರ್ಷಿಕೆ ಚೆನ್ನಾಗಿದೆ. ಸಂಗೀತ ಪ್ರಾಮಿಸಿಂಗ್ ಆಗಿದೆ. ಗೆಟಪ್ ವಿಭಿನ್ನವಾಗಿದೆ. ತೀಕ್ಷ ಎಂದರೆ ಶಾರ್ಪ್. ಕಥೆನೂ ಶಾರ್ಪ್ ಆಗಿದೆ. ಬೇಗನೆ ರಿಲೀಸ್ ಮಾಡಿ. ಕಥೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಂತ ಹೇಳ್ತಿದ್ದರು. ಚಿತ್ರಕ್ಕೆ ಅದೇ ಮುಖ್ಯವಾಗಿರುತ್ತದೆ. ಏನೆಲ್ಲಾ ಬದಲಾವಣೆ ಆಗಬಹುದು. ಕ್ಯಾಮಾರ, ಮೇಕಿಂಗ್ ಬೇರೆ ತರಹ ಬರಬಹುದು. ಆದರೆ ಕಥೆ ಎನ್ನುವುದು ಬಹಳ ಬಹಳ ಮುಖ್ಯ. ಹಾಲಿವುಡ್‌ದಲ್ಲಿ ’ನೋ ಟ್ರಸ್ಟ್ ಸ್ಟಾರ್, ಟ್ರಸ್ಟ್ ಟೇಲ್’ ಎಂದು ಹೇಳಿದ್ದಾರೆ. ಅದನ್ನು ನಂಬಿಕೊಂಡು ಸಿನಿಮಾ ಮಾಡಿ. ನಿಮ್ಮ ಬರವಣಿಗೆ ಮುಖ್ಯ. ಅದನ್ನು ಖಂಡಿತ ಚೆನ್ನಾಗಿ ಮಾಡಿರುತ್ತಿರಾ ಅಂತ ನಂಬಿಕೆ ಇದೆ. ಒಳ್ಳೆಯದಾಗಲಿ ಎಂದರು.

ಈ ಚಿತ್ರ ನನಗೆ ತುಂಬ ಎಮೋಷನಲ್ ಆಗಿದೆ. ಮಗನ ಹುಟ್ಟು ಹಬ್ಬದ ಸಂಭ್ರಮ. ಕುಟುಂಬದ ಸಹಕಾರದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಮದುವೆ ನಂತರ ನಟಿಸ್ತಿನಿ ಅಂದುಕೊಂಡಿರಲಿಲ್ಲ. ಮನೆ ಕಡೆಯಿಂದ ಪ್ರೋತ್ಸಾಹ ಸಿಕ್ಕಿದ್ದಕ್ಕೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ’ಮಮ್ಮಿ’ ಚಿತ್ರದಿಂದ ಬದಲಾವಣೆ ಕಂಡುಬಂತು. ಮಹಿಳೆ ಮುಖ್ಯ ಪಾತ್ರದ ಚಿತ್ರವನ್ನು ನಂಬಿಕೊಂಡು ನಿರ್ಮಾಪಕರು ಬಂಡವಾಳ ಹೂಡಿದರು. ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದೀರಾ. ಅದರಿಂದ ನಿಮಗೆ ಪ್ರೇರಣೆ ಸಿಗುತ್ತೆ. ಮನರಂಜನೆ ಜತೆ ಸಂದೇಶ ಸಿಗುತ್ತದೆ. ನನಗೆ ನಟನೆ ತುಂಬಾ ಇಷ್ಟ. ’ಉಗ್ರಾವತಾರ’ದಲ್ಲಿ ಆಕ್ಷನ್ ಇದೆ. ಅದರಂತೆ ಇದರಲ್ಲಿ ಬೇರೆ ತರಹ ಕಾಣಿಸಿಕೊಳ್ಳುತ್ತೇನೆಂದು ಪ್ರಿಯಾಂಕಉಪೇಂದ್ರ ಸಂತಸವನ್ನು ಹಂಚಿಕೊಂಡರು.

Advertisement

ಗಟ್ಟಿಯಾದ ಕಥೆಯನ್ನು ಮಾಡಿಕೊಂಡಿದ್ದೇವೆ. ಗಾಡ್‌ಫಾದರ್ ಆಗಿ ಉಪೇಂದ್ರ ಅವರು ಇದ್ದಾರೆ. ಸಹ ನಿರ್ದೇಶಕನಾಗಿದ್ದ ನನ್ನನ್ನು ಕರೆದು ಚಿತ್ರ ಮಾಡು ಅಂತ ಧೈರ್ಯ ತುಂಬಿದವರು ಮೇಡಂ. ಮುಂದೆ ಏನೇ ಆದರೂ ಅದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಆಕ್ಷನ್, ಥ್ರಿಲ್ಲರ್ ಡಿಟೆಕ್ಟಿವ್ ಚಿತ್ರದಲ್ಲಿ ಕೊಲೆ ಮುಂತಾದವು ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಮಾದರಿಯಲ್ಲಿ ಹೇಳಲು ಹೊರಟಿದ್ದೇವೆ. ಈಗಲೇ ಸಾರಾಂಶ ಹೇಳಲು ಆಗದು. ಎಲ್ಲವನ್ನು ಚಿತ್ರದಲ್ಲಿ ನೋಡಿ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರೆಂದು ಉಪ್ಪಿ ಸರ್ ಹೇಳಿದ್ದಾರೆ. ಅದರಂತೆ ಶೇಕಡ ೧೦೦ರಷ್ಟು ಹೊಸತನ ಕೊಡುತ್ತೇವೆ ಎಂಬ ಭರವಸೆ ಇದೆ. ತೀಕ್ಷತೆ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಅದರಂತೆ ಚುರುಕುತನ ಇರಬೇಕು. ಅದನ್ನು ಶಕ್ತಿಯಿಂದ ಗೆಲ್ಲೋಕೆ ಆಗೋಲ್ಲ. ಯುಕ್ತಿಯಿಂದ ಗೆಲ್ಲಬಹುದು ಎಂಬುದೇ ತೀಕ್ಷದ ಒನ್ ಲೈನ್ ಎಂದು ನಿರ್ದೇಶಕ ತ್ರಿವಿಕ್ರಮರಘು ಒಂದಷ್ಟು ಮಾಹಿತಿಯನ್ನು ತೆರೆದಿಟ್ಟರು.

Advertisement

ನಿರ್ಮಾಪಕ ಪುರುಷೋತ್ತಮ.ಬಿ.ಕೊಯೂರು, ಸಂಗೀತ ಸಂಯೋಜಕ ಪಿ.ರೋಹಿತ್, ಸಾಹಿತಿ ಕಿನ್ನಾಳ್‌ರಾಜ್ ಮುಂತಾದವರು ಉಪಸ್ತಿತರಿದ್ದು ಚಿತ್ರದ ಕುರಿತಂತೆ ಹೆಚ್ಚೇನು ಹೇಳಲಿಲ್ಲ. ಸುಂದರ ಕಾರ್ಯಕ್ರಮದಲ್ಲಿ ಉಪೇಂದ್ರ ಪೋಷಕರು, ಅಣ್ಣ, ನಟ ನಿರಂಜನ್‌ಸುದೀಂದ್ರ ಹಾಜರಾತಿ ಇತ್ತು. ಅಂದಹಾಗೆ ಚಿತ್ರೀಕರಣವು ಜೂನ್ ಮೊದಲವಾರದಿಂದ ಶುರುವಾಗಲಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com