ಡಾರ್ಲಿಂಗ್ ಕೃಷ್ಣ- ಪ್ರಕಾಶ್ ರಾಜ್ ನಟನೆಯ ಫಾದರ್ ಚಿತ್ರ ಅನೌನ್ಸ್ – ಚಿತ್ರದ ಬಗ್ಗೆ ತಂಡ ಹೇಳಿದ್ದೇನು?

Published on

500 Views
Advertisement

ಆರ್ ಚಂದ್ರು ನೇತೃತ್ವದ ಪ್ರೊಡಕ್ಷನ್ ಹೌಸ್ ಆರ್‌ಸಿ ಸ್ಟುಡಿಯೋಸ್ ಅಡಿಯಲ್ಲಿ ಫಾದರ್ ಸೇರಿದಂತೆ ಆರು ಸಿನಿಮಾಗಳನ್ನು ಘೋಷಿಸಿದ್ದು, ಈ ಸ್ಟುಡಿಯೋ ನಿರ್ಮಾಣದ ಮೊದಲ ಸಿನಿಮಾ ಫಾದರ್ ಶೂಟಿಂಗ್ ಸದ್ಯ ಅರಮನೆ ನಗರಿ ಮೈಸೂರಿನಲ್ಲಿ ಆರಂಭವಾಗಿದೆ ಎಂಬ ಮಾಹಿತಿಗಳು ಸಿಗುತ್ತಿದೆ.

Advertisement

ಫಾದರ್ ಸಿನಿಮಾ ಕುರಿತು ಒಂದಷ್ಟು..!

ಫಾದರ್ ಸಿನಿಮಾವನ್ನು ರಾಜ್ ಮೋಹನ್ ಬರೆದು ನಿರ್ದೇಶಿಸಿದ್ದು, ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕಥೆಯಾಗಿದೆ. ಈ ಚಿತ್ರದಲ್ಲಿ ಕೃಷ್ಣ ಮತ್ತು ಹಿರಿಯ ನಟ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಕೃಷ್ಣ ಮತ್ತು ಪ್ರಕಾಶ್ ರಾಜ್ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ, ಕೃಷ್ಣಾಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ.

Advertisement

ಫಾದರ್ ಸಿನಿಮಾ ಹಾಗೂ ನಟ ಪ್ರಕಾಶ್ ರಾಜ್ ಕುರಿತು ನಟ ಕೃಷ್ಣ ಹೇಳಿದೇನು?

Advertisement

ಈ ಕಥೆ ಕೇಳಿದಾಗ ನನಗಿಂತ ಮೊದಲು ನನ್ನ ಪತ್ನಿ ಮಿಲನಾಗೆ ಇಷ್ಟವಾಯಿತು. ಕಥೆ ಚೆನ್ನಾಗಿದೆ. ನೀವು ಮಾಡಲೇಬೇಕೆಂದು ಮಿಲನ ಹೇಳಿದರು. ಪ್ರಕಾಶ್ ರಾಜ್ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆತುಬಿಟ್ಟಿರುತ್ತೇನೆ. ಇನ್ನೂ ‘ಫಾದರ್’ ಜನರ ಮನಸಿನಲ್ಲಿ ಉಳಿಯುವಂತಹ ಒಂದು ಸಿನಿಮಾ ಎಂದು ನಟ ಕೃಷ್ಣ ಹೇಳಿದರು.

ಸಿನಿಮಾ ಹಾಗೂ ಚಂದ್ರು ಕುರಿತು ಪ್ರಕಾಶ್ ರಾಜ್ ಹೇಳಿದೇನು?

Advertisement

ನಟ ಪ್ರಕಾಶ್ ರಾಜ್ ಮಾತನಾಡಿ, ‘ಚಂದ್ರು ಜೊತೆಗೆ ನಾನು ಮೊದಲು ‘ಕಬ್ಜ’ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ‘ಫಾದರ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ.

ಕಥೆ ಕೇಳಿ ಈ ಸಿನಿಮಾ ಪ್ರಸ್ತುತ ದಿನಮಾನಗಳಲ್ಲಿ ಪ್ರಮುಖವಾಗಿ ಜನರಿಗೆ. ಯುವಕರಿಗೆ ಬೇಕಾಗಿರುವ ಸಿನಿಮಾ ಎಂದೆನಿಸಿತು. ಇದೊಂದು ಕಾಡುವಂತಹ ಚಿತ್ರ. ಆರ್.ಚಂದ್ರು ತಮ್ಮ ಆರ್ ಸಿ ಸ್ಟುಡಿಯೋಸ್ ಮೂಲಕ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಹಾಗೂ ನಾನು ಬಹಳ ಇಷ್ಟ ಪಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ತುಂಬಾ ಖುಷಿಯಾಗಿದೆ ಎಂದರು.

ಕೇವಲ 100 ರೂ. ಇಂದ ಪ್ರಾರಂಭವಾದ ಸಿನಿರಂಗ, ಇಂದು 5 ಸಿನಿಮಾಗಳ ನಿರ್ಮಾಪಕನಾಗಿದ್ದೇನೆ: ನಿರ್ಮಾಪಕ ಆರ್. ಚಂದ್ರು

ಕೇವಲ 100 ರೂಪಾಯಿ ತೆಗೆದುಕೊಂಡು ಗಾಂಧಿನಗರಕ್ಕೆ ಬಂದ ನಾನು, ಇಂದು ಐದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದು ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರಕ್ಕೆ ಗಾಡ್ ಫಾದರ್ ಪ್ರಕಾಶ್ ರಾಜ್ ಎನ್ನಬಹುದು. ಕೃಷ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಈಗ ಸಾಧ್ಯವಾಗುತ್ತಿದೆ.

ಈ ಸಿನಿಮಾ ‘ತಾಜಮಹಲ್’ ತರಹ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದ್ದು, ‘ಫಾದರ್’ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಚಂದ್ರು ತಿಳಿಸಿದ್ದಾರೆ.

ಸಿನಿಮಾ ಕುರಿತು ನಟಿ ಅಮೃತಾ ಅಯ್ಯಂಗಾರ್ ಅಭಿಪ್ರಾಯವೇನು?

ನಮ್ಮೂರಿರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಪ್ರಕಾಶ್ ರೈ ಅವರ ಜೊತೆಗೆ ನಟಿಸುವ ಆಸೆ ಈಡೇರಿದೆ ಎಂದರು ನಟಿ ಅಮೃತಾ ಅಯ್ಯಂಗಾರ್ ತಿಳಿಸಿದರು.

ಚಂದ್ರು ನನ್ನ `ಸಖ ಸಖಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೀನಿ ಎಂದರು ದಯಾಳ್ ಪದ್ಮನಾಭನ್.

‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ‘ಹನುಮಾನ್’ ಖ್ಯಾತಿಯ ಗೌರಾ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com