ಯೆಲ್ಲೋ ಗ್ಯಾಂಗ್ಸ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ಡಾಲಿ ಧನಂಜಯ್

Published on

344 Views
Advertisement

ಕ್ರೈಂ-ಥ್ರಿಲ್ಲರ್ ಕಥಾಶೈಲಿಯ ‘ಯೆಲ್ಲೋ ಗ್ಯಾಂಗ್ಸ್’ ಕನ್ನಡ ಚಲನಚಿತ್ರವು ವಿಭಿನ್ನ ಸ್ಟುಡಿಯೊಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದೆ. ಎರಡು ಹಂತಗಳಲ್ಲಿ ಒಟ್ಟು 25 ದಿನಗಳ ಕಾಲ ನಡೆದ ಚಿತ್ರೀಕರಣವು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ನಡೆದಿದೆ.

Advertisement

ಛಾಯಾಗ್ರಹಣವನ್ನು ಸುಜ್ಞಾನ್ ಅವರು ನಿರ್ವಹಿಸಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಚಿತ್ರದ ಸಂಭಾಷಣೆಯನ್ನು ರವೀಂದ್ರ ಪರಮೇಶ್ವರಪ್ಪ ಹಾಗೂ ಪ್ರವೀಣ್ ಕುಮಾರ್ ಜಿ ಅವರುಗಳು ಬರೆದಿದ್ದಾರೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ), ಡಿ.ಎಸ್ ಪ್ರವೀಣ್ ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಷಣ್ಮುಖ ಹಿರೇಮಧುರೆ ಮತ್ತು ಸುಪ್ರೀತ್ ಅವರು ಚಿತ್ರದ ಕಲಾ ನಿರ್ದೇಶಕರು. ಚಿತ್ರಕ್ಕೆ ಚೇತನ್ ಡಿಸೋಜಾ ಅವರ ಸಾಹಸ ಸಂಯೋಜನೆ ಮತ್ತು ದಿಲೀಪ್ ಶಿವಾನಂದ ಅವರ ವಸ್ತ್ರವಿನ್ಯಾಸವಿದೆ

Advertisement

ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಕೆ ಮತ್ತು ಮುಂತಾದವರಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ ತಂಡವನ್ನು ಹಾರೈಸಿದ್ದರು.

Advertisement

ಇದೀಗ ನಾಯಕ ನಟರಾದ ಧನಂಜಯ ಅವರು ಚಿತ್ರದ ಪಾತ್ರಗಳನ್ನು ಪರಿಚಯಿಸುವ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಪ್ರವೀಣ್ ಮೇಗಳಮನಿ ಅವರ ಪ್ರಚಾರ ವಿನ್ಯಾಸದ ಪೋಸ್ಟರ್ರುಗಳಿಗೆ ಅದ್ಭುತವಾದ ಪ್ರತಿಕ್ರಿಯೆ ದೊರಕುತ್ತಿದೆ.

Advertisement

More Buzz

Buzz 17 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 2 days ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 5 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 5 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com