‘ಪರಿಮಳ ಲಾಡ್ಜ್’ ಚಿತ್ರದ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು

Published on

410 Views
Advertisement

‘ಸಿದ್ಲಿಂಗು’, ‘ನೀರ್ದೋಸೆ’ ಯಂಥ ವಿವಾದಾತ್ಮಕ ಚಿತ್ರಗಳಿಂದ ಹೆಸರಾಗಿರುವ ನಿರ್ದೇಶಕ ವಿಜಯಪ್ರಸಾದ್ ರವರ ಮತ್ತೊಂದು ಚಿತ್ರ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದ್ದು, ಚಿತ್ರದ ಅಶ್ಲೀಲ ಸಂಭಾಷಣೆಯಿಂದ ಸದ್ದು ಮಾಡುತ್ತಿದ್ದು, ಚಿತ್ರದ ಅಶ್ಲೀಲ ಸಂಭಾಷಣೆಗೆ ಕತ್ತರಿ ಪ್ರಯೋಗ ಮಾಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಜ್ ನಾಯ್ಡುರವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಚಿತ್ರದ ಟೀಸರ್​​​ನಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗೆಯದೇ ಇದಲ್ಲಿ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಎಸ್ ವಿಜಯಪ್ರಸಾದ್ ನಿರ್ದೇಶನದ ಲೂಸ್ ಮಾದ, ನೀನಾಸಂ ಸತೀಶ್ ಹಾಗೂ ಸುಮನ್ ರಂಗನಾಥ್ ನಟನೆಯ ‘ಪರಿಮಳ ಲಾಡ್ಜ್ ‘ಎಂಬ ಹೆಸರಿನ ಈ ಚಿತ್ರದ ನಾಯಕ ನಟರ ಮೇಲೆ ಹಾಗೂ ನಿರ್ದೇಶಕ, ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಲಾಗಿದೆ.
ಈ ಚಿತ್ರದಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗಿಸಬೇಕು. ಇಲ್ಲವಾದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅದನ್ನು ಮೀರಿ ಚಿತ್ರ ಬಿಡುಗಡೆ ಮಾಡಿದ ಪಕ್ಷದಲ್ಲಿ ವಾಣಿಜ್ಯ ಮಂಡಳಿ ಮುಂದೆ ಹಾಗೂ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. 
08E462FE-1F92-455F-8BC8-6F13AD0911E1

Advertisement

ಇನ್ನೂ ಹೋರಾಟಗಾರರ ದೂರು ಸ್ವೀಕರಿಸಿ ಮಾತನಾಡಿದ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಎನ್ ಎಮ್ ಸುರೇಶ್, ನಾನು ಕೂಡ ಚಿತ್ರದ ಟೀಸರ್ ನೋಡಿದೆ. ಕೆಲವು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇಂದು ಅಧ್ಯಕ್ಷರು ಇಲ್ಲ, ಅವರು ನಾಳೆ ಬರುತ್ತಾರೆ. ಬಂದ ಮೇಲೆ ಚಿತ್ರತಂಡದ ಜೊತೆ ಮಾತನಾಡುತ್ತೇವೆ. ಆನ್ ಲೈನ್ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಚಿತ್ರದಲ್ಲಿ ಇಂತಹ ಸಂಭಾಷಣೆಗೆ ಕಡಿವಾಣ ಹಾಕುವಂತೆ ನಿರ್ದೇಶಕರಿಗೆ ತಿಳಿಸುತ್ತೇವೆ ಎಂದು ಎನ್ ಎಮ್ ಸುರೇಶ್ ಭರವಸೆ ನೀಡಿದರು.
ಇನ್ನು ಪರಿಮಳ ಲಾಡ್ಜ್ ಚಿತ್ರದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿಗೆ ಸಲಿಂಗ ಕಾಮಿಗಳು ಎಂಬ ಟೈಟಲ್ ನೀಡಲಾಗಿದೆ. ಅಲ್ಲದೇ ಚಿತ್ರದಲ್ಲಿ ನಟಿಸುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಟೈಟಲ್ ನೀಡಿ ಪರಿಚಯ ಮಾಡುವ ಮೂಲಕ ಇದು ಕೇವಲ ಚೇಷ್ಟೆ ಅಷ್ಟೇ ಎಂದು ನಿರ್ದೇಶಕ ವಿಜಯ ಪ್ರಸಾದ್ ಸಮರ್ಥಿಸಿ ಕೊಂಡಿದ್ದರು.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com