flixOye
Buzz

ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಕಿಲಾಡಿ ಜೋಡಿ

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆಮಾತಾದ ದಿವ್ಯಶ್ರಿ ಮತ್ತು ಗೋವಿಂದೇ ಗೌಡ ತಮ್ಮ ಹಾಸ್ಯದ ಮೂಲಕ ಕರ್ನಾಟಕದ ಮನೆಮಂದಿಯನ್ನೆಲ್ಲಾ ನಕ್ಕು ನಗಿಸಿದ ಈ ಜೋಡಿಯ ನಿಶ್ಚಿತಾರ್ಥ ನಿನ್ನೇ ಅದ್ದೂರಿಯಾಗಿ ನಗರದ ಮುದ್ದಿನಪಾಳ್ಯದಲ್ಲಿರೋ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಸಮಯದಲ್ಲಿ ಇವರಿಬ್ಬರಲ್ಲಿ ಹುಟ್ಟಿದ ಸ್ನೇಹ ಪ್ರೀತಿಗೆ ತಿರುಗಿತು. ಕುಟುಂಬದ ಸಮ್ಮುಖದಲ್ಲಿ ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥವನ್ನು ಮಾಡಿಕೊಂಡರು. ಕೆಲವು ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಜೋಡಿ ಮಾರ್ಚ್ 14 ರಂದು ಶೃಂಗೇರಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ.

Advertisement

ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು‌ ಪಡೆದಿರುವ ದಿವ್ಯಾ ಮತ್ತು ಗೋವಿಂದೇ ಗೌಡ ಇಬ್ಬರು ಈಗ ತಮ್ಮ ತಮ್ಮ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಸಂಬಂಧಿತ · Related