“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Published on

565 Views
Advertisement

ಜೈಲಿನಲ್ಲಿರುವ ದರ್ಶನ್‌ ರವರನ್ನು ಭೇಟಿ ಮಾಡಿದ ಟೈಗರ್‌ ಪ್ರಭಾಕರ್‌ ಮಗ ವಿನೋದ್‌ ಪ್ರಭಾಕರ್‌ ಹೇಳಿದ್ದೇನು?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

Advertisement

ನಟ ದರ್ಶನ್‌ ಅವರನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶನಿವಾರ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಜುಲೈ 4ನೇ ತಾರೀಖಿನ ವರೆಗೆ ದರ್ಶನ್‌ ಹಾಗೂ ಇತರೆ 3 ಆರೋಪಿಗಳೊಂದಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Advertisement

ಈ ಪ್ರಕರಣದ ಎ1 ಆರೋಪಿಯಾದ ಪವಿತ್ರ ಗೌಡ ಮತ್ತು ಇತರ 12 ಮಂದಿಯನ್ನು ಜೂನ್‌ 20ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಎ1 ಆರೋಪಿಯಾದ ಪವಿತ್ರ ಗೌಡರವರನ್ನು ಅವರ ಕುಟುಂಬದವರು ಅಂದರೆ ಮಗಳು ಮತ್ತು ಅವರ ತಾಯಿ ನೋಡಲು ಹೋಗಿದ್ದರು.

Advertisement

ಆದರೆ, ದರ್ಶನ್‌ ರವರ ಬಗ್ಗೆ ಕನ್ನಡ ನಟ/ನಟಿಯರು ಮಾತನಾಡುತ್ತಿಲ್ಲ. ದರ್ಶನ್‌ ರವರ ಬಗ್ಗೆ ಕೇಳಿದರೆ, ಬೇರೆ ಪ್ರಶ್ನೆಯನ್ನು ಕೇಳಿ ಎನ್ನುವ ಹಾಗೆ ಹೇಳುತ್ತಿದ್ದರು ಹಾಗೂ ದರ್ಶನ್ ರವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡುವ ಸುದ್ದಿಯೂ ಕೇಳಿಬರುತ್ತಿದೆ.

ಇದೀಗ, ದರ್ಶನ್‌ ರವರ ಆಪ್ತ ಹಾಗೂ ಟೈಗರ್‌ ಪ್ರಭಾಕರ್‌ ರವರ ಮಗ ವಿನೋದ್‌ ಪ್ರಭಾಕರ್ ರವರು ದರ್ಶನ್‌ ರವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು, ವಿನೋದ್ ಪ್ರಭಾಕರ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್‌ ರವರ ಜೊತೆ ಬಹಳ ಮಾತನಾಡಲು ಆಗಲಿಲ್ಲ, ನನ್ನನ್ನು ದರ್ಶನ್‌ ರವರು ನೋಡಿದ ಮೇಲೆ “ಹಾಯ್‌ ಟೈಗರ್” ಎಂದರು, ನಾನು “ಹಾಯ್‌ ಬಾಸ್” ಎಂದರೆ, ದರ್ಶನ್‌ ರವರು ಮೌನವಾಗಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ದರ್ಶನ್ ಬಗ್ಗೆ ವಿಚಾರಣೆ ನಡೆಯುತ್ತಿದ್ದರಿಂದ, ವಿಷಯ ತಿಳಿಯದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಿಲ್ಲ ಎಂದರೆ ಬಾಸ್‌ ಮೇಲೆ ಗೌರವ ಮತ್ತು ವಿಶ್ವಾಸ ಇಲ್ಲವೆಂದು ಅರ್ಥವಲ್ಲ. ಈ ವಿಷಯದಲ್ಲಿ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com