ದರ್ಶನ್ ಕುಟುಂಬದ ಮನೋಜ್ ಅಭಿನಯದ ಟಕ್ಕರ್‍ಗೆ ಚಾಲನೆ

Published on

298 Views
Advertisement

ನಾಗೇಶ್ ಕೋಗಿಲು ಅವರ ನಿರ್ಮಾಣದ ಎರಡನೇ ಚಿತ್ರ ಟಕ್ಕರ್, ಮೊನ್ನೆ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ನಡೆದ ಸರಳ ಪೂಜೆಯೊಂದಿಗೆ ಆರಂಭವಾಯಿತು. ಚಕ್ರವರ್ತಿ ಖ್ಯಾತಿಯ ಎ.ವಿ. ಚಿಂತನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದ ನಾನಾ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ, ಯಲಹಂಕ ಬಳಿಯ ಕೋಗಿಲು ಮೂಲದ ನಾಗೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಸ್.ಎಲ್.ಎನ್. ಕ್ರಿಯೇಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದವರ್ಷವಷ್ಟೇ ಹುಲಿರಾಯ ಎಂಬ ಸಿನಿಮಾವನ್ನು ಅವರು ನಿರ್ಮಿಸಿದ್ದರು.

Advertisement

ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್ ಅಭಿನಯದ ರನ್ ಆ್ಯಂಟನಿ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ಈ ಚಿತ್ರಕ್ಕೆ ಆಯಕ್ಷನ್-ಕಟ್ ಹೇಳುತ್ತಿದ್ದಾರೆ. ಎಪ್ಪತ್ತೈದಕ್ಕೂ ಹೆಚ್ಚು ಜನಪ್ರಿಯ ಹಾಡುಗಳನ್ನು ರಚಿಸಿರುವ ಇವರು, ತೆರೆಗೆ ಬರಲು ಸಿದ್ದಗೊಳ್ಳುತ್ತಿರುವ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಸೆಲ್ಫಿ ಚಿತ್ರಕ್ಕೆ ಸಂಭಾಷಣೆಯನ್ನೂ ಸಹ ರಚಿಸಿದ್ದಾರೆ. `ಟಕ್ಕರ್’ ಸಿನಿಮಾಗೆ ಕತೆ, ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಕರ್ನಾಟಕ ಮಾತÀ್ರವಲ್ಲದೆ ಜಗತ್ತಿನ ಎಲ್ಲ ಭಾಗಗಳಲ್ಲಿ ಅಪಾರ ಅಭಿಮಾನಿವರ್ಗವನ್ನು ಹೊಂದಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬದ ಕುಡಿ ಮನೋಜ್. ದರ್ಶನ್ ಅವರು ನಾಯಕನಟನಾಗಿ ನಟಿಸಿದ್ದ ಅಂಬರೀಶ ಮತ್ತು ಚಕ್ರವರ್ತಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಮನೋಜ್ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಟಕ್ಕರ್. ದರ್ಶನ್ ಅವರ ಕುಟುಂಬದ ಹುಡುಗ ಎಂಬ ಕಾರಣದ ಜೊತೆಗೆ ಅಪಾರ ಪ್ರತಿಭಾವಂತರೂ ಆಗಿರುವ ಮನೋಜ್ ಟಕ್ಕರ್ ಸಿನಿಮಾದ ನಾಯಕನಟರಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Advertisement

ಪುಟ್ಟಗೌರಿ ಮದುವೆ ಎನ್ನುವ ಕಿರುತೆರೆ ಧಾರಾವಾಹಿನ ಮೂಲಕ ಕರ್ನಾಟಕದ ಮನೆಮಗಳಾಗಿರುವ ಹುಡುಗಿ ರಂಜನಿ ರಾಘವನ್. ರಾಜಹಂಸ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾರಂಕ್ಕೆ ಬಂದಿರುವ ರಂಜನಿ ನಟನೆಯ ಎರಡನೇ ಸಿನಿಮಾ ಟಕ್ಕರ್. ಧಾರಾವಾಹಿಗಳಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ರಂಜನಿ ರಾಘವನ್ `ಟಕ್ಕರ್’ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪ್ರೇಕ್ಷಕವಲಯದಲ್ಲೂ ಕೌತುಕ ಸೃಷ್ಟಿಸಿದೆ.
ಜಟ್ಟ, ಅಮರಾವತಿ, ಗೊಂಬೆಗಳ ಲವ್, ಬ್ಯೂಟಿಫುಲ್ ಮನಸುಗಳು, ಮಡಮಕ್ಕಿ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಅಭಿರುಚಿಯ ಸಿನಿಮಾಗಳು ಎನಿಸಿಕೊಂಡ ಸಾಕಷ್ಟು ಚಿತ್ರಗಳಿಗೆ ಕ್ಯಾಮೆರಾ ಕೆಲಸ ನಿಭಾಯಿಸಿರುವವರು ಕಿರಣ್ ಹಂಪಾಪುರ. ಹೊಸ ಬಗೆಯ ಛಾಯಾಗ್ರಹಣದೊಂದಿಗೆ ನೈಜವಾಗಿ ದೃಷ್ಯಗಳನ್ನು ಕಟ್ಟಿಕೊಡುವ ಮಾಂತ್ರಿಕ ಛಾಯಾಗ್ರಾಹಕ ಕಿರಣ್ ಹಂಪಾಪುರ ಟಕ್ಕರ್ ಚಿತ್ರದ ಕಣ್ಣಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೃಥ್ವಿ, ಸವಾರಿ, ಮಾರ್ಚ್ 22, ರನ್ ಆ್ಯಂಟನಿ ಮುಂತಾದ ಯಶಸ್ವೀ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ತಮ್ಮ ಸಿನಿಮಾಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಬರುವಲ್ಲಿ ಶ್ರಮಿಸಿರುವ ಉದಯೋನ್ಮುಖ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ವಿಶ್ವವಿಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪುತ್ರನಾಗಿರುವ ಮಣಿಕಾಂತ್ ಕನ್ನಡ ಚಿತ್ರರಂಗದ ಹೆಮ್ಮೆಯ ಸಂಗೀತ ನಿರ್ದೇಶಕ. ಇಂಥ ಪ್ರತಿಭಾವಂತ ಮ್ಯೂಸಿಕ್ ಡೈರೆಕ್ಟರ್ ಈಗ ಟಕ್ಕರ್ ಸಿನಿಮಾದ ಮೂಲಕ ಹೊಸ ಬಗೆಯ ಹಾಡುಗಳಿಗೆ ಸ್ವರ ಸಂಯೋಜಿಸುತ್ತಿದ್ದಾರೆ.

Advertisement

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಸಂಭಾಷಣೆ ರಚಿಸಿ, ಅಭಿಮಾನಿಗಳನ್ನು ಅಪಾರವಾಗಿ ರಂಜಿಸಿದವರು ಸಂಭಾಷಣೆಕಾರ ಚಿಂತನ್. ಅವರು ಟಕ್ಕರ್ ಸಿನಿಮಾಗೆ ಸಂಭಾಷಣೆ ರಚಿಸಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ಯಶಸ್ವೀ ಮತ್ತು ಸೂಪರ್ ಸ್ಟಾರ್‍ಗಳ ಸಿನಿಮಾಗಳಿಗೆ ಸಂಕಲ ಕೆಲಸ ನಿರ್ವಹಿಸುತ್ತಾ ಬಂದಿರುವ ಕೆ.ಎಂ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಟಕ್ಕರ್ ಸಿನಿಮಾಗಿದೆ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com