flixOye
Buzz

Chef Chidambara OTT: ಅನಿರುದ್ಧ ಜಟ್ಕರ್ ನಟನೆಯ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್

ನಟ ಅನಿರುದ್ಧ ಜಟ್ಕರ್
ಅವರ ಚಿತ್ರ ‘ಚೆಫ್‌ ಚಿದಂಬರ’ ಈಗ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ಸಜ್ಜಾಗಿದೆ. ಜೂನ್ 14ರಂದು ಬಿಡುಗಡೆಯಾದ ಈ ಚಿತ್ರ, ವಿಮರ್ಶಕರ ಮೆಚ್ಚುಗೆ ಪಡೆದಿದ್ದರೂ ಚಿತ್ರಮಂದಿರಗಳಲ್ಲಿ ಹೆಚ್ಚು ಕಾಲ ಪ್ರದರ್ಶನ ಕಾಣಲಿಲ್ಲ.

‘ಚೆಫ್‌ ಚಿದಂಬರ’ ಈಗ ಅಮೆಜಾನ್‌ ಪ್ರೈಮ್‌ ಪ್ಲಾಟ್‌ಫಾರ್ಮ್‌ನಲ್ಲಿ ಜುಲೈ 24ರಿಂದ ಸ್ಟ್ರೀಮಿಂಗ್‌ ಆಗಲಿದೆ.

Advertisement

ಅಡುಗೆ ಮಾಡಿ ಬಡಿಸುವಲ್ಲಿ ನಿಪುಣನಾಗಿರುವ ಚಿದಂಬರನ ಮನೆಯಲ್ಲಿಯೇ ಸಂಭವಿಸಿದ ಒಂದು ಸಾವು, ಆತನ ಜೀವನವನ್ನು ತಿರುಗಿಸುತ್ತೆ. ಪೊಲೀಸರಿಂದ ಆತನ ಮೇಲೆ ಹೇರಲಾಗುವ ಅಪರಾಧ, ಮತ್ತು ಅದರಿಂದ ಹೊರಬರಲು ಆತ ಮಾಡುವ ಸಾದನೆಯನ್ನೆಲ್ಲ ವಿವರಿಸಿರುವ ಕಥೆ ಇದು.

ಈ ಡಾರ್ಕ್‌ ಕಾಮಿಡಿ ಶೈಲಿಯ ಸಿನಿಮಾದಲ್ಲಿ ಶೀರ್ಷಿಕೆ ಪಾತ್ರದಲ್ಲಿ ನಟ ಅನಿರುದ್ಧ ಜತ್ಕರ್. ಚಿತ್ರದಲ್ಲಿ ನಿಧಿ ಸುಬ್ಬಯ್ಯ, ರಚೆಲ್‌ ಡೇವಿಡ್‌, ಶರತ್‌ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್‌, ಶಿವಮಣಿ ಸೇರಿ ಇನ್ನು ಹಲವರು ನಟಿಸಿದ್ದಾರೆ.

ನಿರ್ದೇಶಕ ಆನಂದರಾಜ್‌ ಕಥೆ ಬರೆದಿದ್ದು, ಗಣೇಶ್ ಪರಶುರಾಮ್ ಚಿತ್ರಕಥೆ ಹಾಗು ಸಂಭಾಷಣೆ ಬರೆದಿದ್ದಾರೆ.

ಸಂಬಂಧಿತ · Related