ಚಿರಂಜೀವಿಯವರು ನನ್ನ ದೊಡ್ಡಣ್ಣನಂತೆ ಎಂದ ಶಿವಣ್ಣ..!!

Published on

371 Views
Advertisement

‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಪ್ರಚಾರಕ್ಕೆ ಚಿತ್ರದ ನಾಯಕ ನಟ ಚಿರಂಜೀವಿ, ರಾಮ್ ಚರಣ್ ತೇಜ್, ತಮನ್ನಾ ಬೆಂಗಳೂರಿಗೆ ಆಗಮಿಸಿದ್ದರು. ಈ‌ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದು ಈ ಸಂದರ್ಭದಲ್ಲಿ ಅವರು ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ಕಾರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ವಿಡಿಯೋ ಕರೆ ಮೂಲಕ ಎಲ್ಲರ ಜೊತೆ ಮಾತನಾಡಿ, ‘ಈ ಚಿತ್ರ ಕನ್ನಡದಲ್ಲಿ ಬರುತ್ತಿರುವುದು‌ ತುಂಬಾ‌ ಖುಷಿಯ‌ ವಿಚಾರ.

Advertisement


ಕನ್ನಡಿಗರೆಲ್ಲರೂ ನೋಡಬೇಕಾದ ಚಿತ್ರ.ಈ ಸಂದರ್ಭದಲ್ಲಿ ಉಪಸ್ಥಿತರಿರುವ ಶಿವಣ್ಣನಿಗೆ ತುಂಬಾ ಥ್ಯಾಂಕ್ಸ್, ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿದರು. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಮೇಕಿಂಗ್ ವಿಡಿಯೋವನ್ನು ರಾಜ್ಯದ ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಬಿಡುಗಡೆಗೊಳಿಸಿದರು. ಚಿತ್ರದ ನಿರ್ಮಾಪಕ ಚಿರಂಜೀವಿ ಪುತ್ರ ನಟ ರಾಮ್ ಚರಣ್ ತೇಜ್ ಮಾತನಾಡಿ, “ಕನ್ನಡದಲ್ಲಿ ನನಗೆ ತುಂಬಾ‌ ಇಷ್ಟವಾಗುವ ನಟ ಶಿವರಾಜ್ ಕುಮಾರ್. ನಾನು ಅವರ ಫ್ಯಾನ್” ಎಂದರು. ನಂತರ ಮಾತನಾಡಿದ ಶಿವಣ್ಣ “ಇದು ನನಗೆ ನನ್ನ ಫ್ಯಾಮಿಲಿ ಫಂಕ್ಷನ್ ತರ, ನಮ್ ಫ್ಯಾಮಿಲಿ ಜೊತೆ‌ ಅವರು ಯಾವಾಗಲೂ ಇರ್ತಾರೆ. ಅವರು ನಮ್ಮ ಫ್ಯಾಮಿಲಿ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ನಾವು ಕೂಡ ಅವರ ಫ್ಯಾಮಿಲಿ ಜೊತೆ ಇಟ್ಟಿದ್ದೇವೆ.

Advertisement

ಅಪ್ಪಾಜಿಯವರು ಚಿರಂಜೀವಿಯವರನ್ನು ಮತ್ತೊಬ್ಬ ಮಗ ಎಂದು ಹೇಳುತ್ತಿದ್ದರು. ನನಗೆ ಅವರು ದೊಡ್ಡಣ್ಣ ಮಾತ್ರವಲ್ಲದೆ ನಾನು‌ ಅವರ ಫ್ಯಾನ್. ನಾನು ಪವನ್ ಕಲ್ಯಾಣ್ ಅವರದು ದೊಡ್ಡ ಫ್ಯಾನ್. ಅವರ ಫ್ಯಾಮಿಲಿಯಲ್ಲಿ ಎಲ್ಲರೂ ನನಗೆ ಇಷ್ಟ. ‘ಸೈರಾ’ ದೊಡ್ಡ ತಾರಾಗಣ ಇರುವ ಚಿತ್ರ ನಾನು ಅಕ್ಟೋಬರ್ 2 ಫಸ್ಟ್ ಶೋ ಓರಾಯನ್ ಮಾಲ್ ನಲ್ಲಿ ನೋಡುತ್ತೇನೆ. ನಿಮ್ಮಷ್ಟೇ ನಾನು ಕೂಡ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ. ನಮ್ಮ ಮಾತೃಭಾಷೆಗಿಂತ ಮೊದಲು‌ ನಾವೆಲ್ಲರೂ ಭಾರತೀಯರು. ಚಿತ್ರ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ಎಂದು ಹೇಳಿ ಚಿತ್ರಕ್ಕೆ, ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭಕೋರಿದರು. ನಂತರ ಕನ್ನಡದಲ್ಲೇ ಮಾತು ಆರಂಭಿಸಿದ ಚಿರಂಜೀವಿ ಯವರು “ನನ್ನ ಪ್ರೀತಿಯ ಕನ್ನಡದ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು. ನಾನು ಚೆನ್ನಾಗಿದ್ದೀನಿ. ನೀವು‌ ಚೆನ್ನಾಗಿದ್ದೀರ ?” ಎಂದು‌ ಕೇಳುವ ಮೂಲಕ‌ ಮಾತು‌ ಆರಂಭಿಸಿದ ಚಿರಂಜೀವಿಯವರು “ಡಾ.ರಾಜ್ ಕುಮಾರ್ ರವರು ದೇವರ ಸ್ವರೂಪಿ. ಅವರ ಮಗ ಶಿವರಾಜ್ ಕುಮಾರ್ ನನಗೆ ತಮ್ಮನಿದ್ದಂತೆ. ನಮ್ಮ ಚಿತ್ರದಲ್ಲಿ ಅಭಿನಯಿಸಿದ ಸುದೀಪ್ ಕೂಡ ನನಗೆ ಸಹೋದರನಿದ್ದಂತೆ” ಎಂದು ಹೇಳಿದರು. ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿರುದು ಪಡೆದಿರುವ ನರಸಿಂಹ ರೆಡ್ಡಿಯ ಚಿತ್ರ ‘ಸೈರಾ’. ಚಿತ್ರದ ಆಡಿಯೋ ಹಕ್ಕನ್ನು ಲಹರಿ‌ ಸಂಸ್ಥೆ ಪಡೆದಿದ್ದು, ಚಿತ್ರ ಇದೇ ಬರುವ ಅಕ್ಟೋಬರ್ 2 ರಂದು ತೆರೆ ಕಾಣಲಿದೆ.

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com