ಚಪಾಕ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

Published on

463 Views

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಚಪಾಕ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳಿಗೆ ಹೃದಯ ಮುಟ್ಟುವಂತೆ ಮಾಡಿದೆ.

ಹೆಣ್ಣಿಗೆ ಸೌಂದರ್ಯ ಎನ್ನುವುದು ಅತಿ ಮುಖ್ಯ. ಆ ಸೌಂದರ್ಯಕ್ಕೆ ಒಂದು ಸಾಸಿವೆಯಷ್ಟು ಕಪ್ಪು ಚುಕ್ಕೆ ಆದರೂ ಆಕೆಯ ಮನಸ್ಸು ತಡೆದುಕೊಳ್ಳುವುದಿಲ್ಲ. ಅಂತಹದ್ರಲ್ಲಿ ಆಸಿಡ್ ದಾಳಿಯಾದ್ರೆ ಆ ಹೆಣ್ಣಿನ ಸ್ಥಿತಿ ಹೇಗಾಗಬೇಡ. ತನಗೊಬ್ಬ ರಾಜಕುಮಾರ, ಒಂದು ಪುಟ್ಟ ಸಂಸಾರ, ಮಕ್ಕಳು ಹೀಗೆ ನೂರಾರು ಕನಸು ಹೊತ್ತು, ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದ್ದ ಯುವತಿ ಬಾಳಲ್ಲಿ ಆ ಪಾಪಿ ಯುವಕ ಮರೆಯಲಾಗದ ಅಧ್ಯಾಯವಾಗಿಬಿಟ್ಟ. ಆಸಿಡ್ ದಾಳಿ ಬಳಿಕ ಆಕೆಯ ಮನಸ್ಸಲ್ಲಿ ನೂರಾರು ಯೋಚನೆ ಬಂದಿರಬಹುದು. ನನ್ನ ಮುಖವನ್ನು ಹೇಗೆ ತೋರಿಸಲಿ. ನನ್ನನ್ನು ಯಾರು ಮದುವೆ ಆಗ್ತಾರೆ, ನನಗೆ ಈ ಬದುಕೇ ಬೇಡ ಎಂಬ ಯೋಚನೆಗಳು ಬಂದಿರಬಹುದು. ಅದೇನೇ ಇದ್ದರೂ ಆ ಯುವತಿ ಧೈರ್ಯ ಕಳೆದುಕೊಂಡಿಲ್ಲ. ನೋವು, ಸಂಕಟ, ಅವಮಾನ ಎಲ್ಲವನ್ನು ಮೀರಿ ಬೆಳೆದಳು. ಅನೇಕ ಯುವತಿಯರಿಗೆ ಮಾದರಿಯಾದರು.

ಇಂತಹ ದಿಟ್ಟೆದೆಯ ಹೆಣ್ಣಿನ ಕಥೆ ಈಗ ‘ಜಾಪಕ್’ ಸಿನಿಮಾದ ಮೂಲಕ ಬರುವುದು ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ. 2005ರಲ್ಲಿ ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್ ವಾಲ್ ಅವರ ಯಶೋಗಾಥೆ ಈಗ ಸಿನಿಮಾ ಆಗ್ತಿದೆ. ನಟಿ ದೀಪಿಕಾ ಪಡುಕೋಣೆ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅದು 2005, ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತಹ ಆಸಿಡ್ ದಾಳಿ ನಡೆದ ವರ್ಷ. ಲಕ್ಷ್ಮೀ ಅಗರ್ ವಾಲ್ (15) ಎಂದಿನಂತೆ ಮ್ಯೂಸಿಕ್ ಕ್ಲಾಸ್ ಗೆ ಹೋಗುತ್ತಿದ್ದ ವೇಳೆ, ಪ್ರೀತಿಸು ಎಂದು ಪೀಡಿಸುತ್ತಿದ್ದ ಯುವಕ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದ. ಈ ಘಟನೆಯಿಂದ ಲಕ್ಷ್ಮಿ ಅವರ ಮುಖ ಮತ್ತು ದೇಹಕ್ಕೆ ಗಂಭೀರ ಗಾಯಗಳಾಯಿತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದ ಕಾರಣ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲು ಸಾಧ್ಯವಾಯಿತು. ಸುಮಾರು 10 ವರ್ಷ, ಹಲವು ಸರ್ಜರಿಗೆ ಲಕ್ಷ್ಮಿ ಒಳಗಾಗಿದ್ದಾರೆ. ಇದರಿಂದ ಮಾನಸಿಕವಾಗಿ ಆಕೆಯೆ ಮೇಲೆ ಪರಿಣಾಮ ಬೀರಿದೆ. ಅದ್ಯಾವುದಕ್ಕೂ ಸೋಲದ ಲಕ್ಷ್ಮಿ ಬದುಕನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಹೋದರು. ತನಗಾದ ಅನ್ಯಾಯ ಮತ್ತೆ ಯಾವ ಹೆಣ್ಣಿಗೂ ಆಗಬಾರದು ಎಂಬ ಕಾರಣಕ್ಕೆ ಆಸಿಡ್ ದಾಳಿಕೋರರ ವಿರುದ್ಧ ಕ್ರಾಂತಿ ಆರಂಭಿಸಿದರು.
‘ಚಪಾಕ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಲತಿ ಹೆಸರಿನ ಯುವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 2020ರ ಜ. 20 ರಂದು ಬಿಡುಗಡೆಯಾಗಲಿದೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com