ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಚಂದ್ರಕುಮಾರಿ”

Published on

410 Views
Advertisement

ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ “ಚಂದ್ರಕುಮಾರಿ” ಧಾರಾವಾಹಿ ಇದೇ ಜನವರಿ 7 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಶತಮಾನಗಳ ಹಿಂದೆ ನಡೆದು ಹೋಗಿದ್ದ್ದ ಅಮ್ಮ ಮಗಳ ನಡುವಿನ ಸಂಘರ್ಷದ ಕಥೆಗೆ ಮತ್ತೆ ಮರು ಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇ ಚಂದ್ರಕುಮಾರಿ ಧಾರಾವಾಹಿಯ ಜೀವಾಳ. ಈಗಾಗಲೇ ನಂದಿನಿ, ಜೈ ಹನುಮಾನ್‍ನಂಥ ಅದ್ದೂರಿ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಲೋಕದಲ್ಲಿಯೇ ಹೊಸ ದಾಖಲೆ ಬರೆದ ಉದಯ ಟಿವಿ ಚಂದ್ರಕುಮಾರಿ ಮೂಲಕ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ನಿಟ್ಟಿನಲ್ಲಿದೆ. ಹೊಸ ಕಾಲದ ಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್‍ಗಳು ವೀಕ್ಷಕರ ಮನರಂಜನೆಗೆ ಭರ್ಜರಿ ಸರಕು ಒದಗಿಸುತ್ತವೆ.

Advertisement

ಇದರ ಜೊತೆ ಸಂಬಂಧಗಳ ಮಹತ್ವ, ಪ್ರೀತಿ, ಆ್ಯಕ್ಷನ್ ಎಲ್ಲವೂ ಇದ್ದು ನೋಡುಗರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ. ಚಂದ್ರಕುಮಾರಿ ಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದು ತುಂಬಾನೆ ಕಲರ್‍ಫುಲ್ಲಾಗಿ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ರಡಾನ್, ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಜೊತೆಗೆ ಖ್ಯಾತ ನಟಿ ರಾಧಿಕಾ ಶರತ್‍ಕುಮಾರ್ ಹಾಗೂ ನಮ್ಮ ಕನ್ನಡ ಚಿತ್ರರಂಗದÀ ಖ್ಯಾತ ಕಲಾವಿದರು ಮತ್ತು ಕಲಾ ನಿರ್ದೇಶಕರಾದ ಅರುಣ್ ಸಾಗರ್, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಶೋಭಾ ನಾಯ್ಡು ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.

Advertisement

“ಚಂದ್ರಕುಮಾರಿ” ಇದೇ ಜನವರಿ 7ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com