
ಕನ್ನಡ ಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿಗಳು ಕನ್ನಡ ಬಿಗ್ ಬಾಸ್’ನ ಮಾಜಿ ಸ್ಪರ್ಧಿಗಳಾಗಿದ್ದು, ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗಳು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಚಂದನವನದಲ್ಲಿ ಕ್ಯೂಟ್ ಕಪಲ್ ಎಂದೇ ಪ್ರಸಿದ್ಧಿಯಾಗಿದ್ದ ದಂಪತಿಗಳು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.

ದಂಪತಿಗಳ ವಿಚ್ಚೇದನ ಶುಕ್ರವಾರದಂದು ಬಹಳ ಸುದ್ದಿಯಾಗಿತ್ತು, ಈ ವಿಚಾರ ಸುಳ್ಳಾಗಿರಲಿ ಎಂದು ಅಭಿಮಾನಿಗಳು ಕೂಡ ಆಶಿಸುತ್ತಿದ್ದರು. ಆದರೆ, ದಂಪತಿಗಳು ಏಕಾಏಕಿ ಬೇರೆಯಾಗಿದ್ದಾರೆ ಮತ್ತು ಈ ವಿಷಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ವಿಚ್ಚೇದನದಕ್ಕೆ ಕೌಟುಂಬಿಕ ನ್ಯಾಯಲಯದಿಂದ ಕೈ-ಕೈ ಹಿಡಿದು ಹೊರಡುತ್ತಿರುವುದನ್ನು ಕಂಡು ಅಭಿಮಾನಿಗಳು, ವಿಚ್ಛೇದನ ಪಡೆದ ನಂತರವೂ ದಂಪತಿಗಳು ಕೈ ಹಿಡಿದು ಹೋಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಚ್ಚೇದನದ ವಿಷಯ ಎಲ್ಲಿರಿಗೂ ತಿಳಿಯುತ್ತಿದ್ದಂತೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೋಸ್ಕರ ಪೋಸ್ಟ್ ಮಾಡಿದ್ದಾರೆ – “ಈ ದಿನ ನಾವಿಬ್ಬರು ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಗೂ ಧನ್ಯವಾದಗಳು”- ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂದು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
AdvertisementView this post on Instagram
ದಂಪತಿಗಳು ಬೇರೆಯಾಗಿರುವ ಕಾರಣವನ್ನು ಅಭಿಮಾನಿಗಳು ಕೇಳುತ್ತಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗಳನ್ನು ಕೂಡ ಮಾಡಿದ್ದಾರೆ. ಆದರೆ ಇದೀಗ ತಿಳಿದಿರುವ ಮಾಹಿತಿಯ ಪ್ರಕಾರ ವಿಚ್ಛೇದನಕ್ಕೆ ನಿಜವಾದ ಕಾರಣ ಎಂದರೆ ದಂಪತಿಗಳ ನಡುವೆ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಗ್ ಇರುವುದಿಲ್ಲ ಹಾಗೂ ಒಂದು ವರ್ಷದಿಂದಲೇ ಇಬ್ಬರೂ ದೂರ ಇರುವುದಾಗಿ, ಹೊಂದಾಣಿಕೆ ಇಲ್ಲದಿರುವುದರಿಂದ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 7, ಶುಕ್ರವಾರದಂದು ವಿಚ್ಛೇದನದ ಪ್ರಕ್ರಿಯೆ ಸಂಪೂರ್ಣವಾಗಿದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ








