ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದತೆ ನಡೆಸಿದೆ ಸತೀಶ್ ನೀನಾಸಂ ಅಭಿನಯದ “ಚಂಬಲ್”
ಪೃಥ್ವಿ ಸವಾರಿ ಸವಾರಿ-2 ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಜೇಕಬ್
ವರ್ಗೀಸ್ ಅವರ ನಿರ್ದೇಶನದಲ್ಲಿ ಸತೀಶ್ ನೀನಾಸಂ ನಾಯಕನಾಗಿ
ನಟಿಸುತ್ತಿರುವ “ಚಂಬಲ್” ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು
ಹೊಸವರ್ಷದಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ಚಿತ್ರದ ಟೀಸರ್
ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಸೋನು ಗೌಡ ಅವರು ಸತೀಶ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ, ಕಿಶೋರ್, ನಿರ್ದೇಶಕ ಪವನ್ ಕುಮಾರ್,ಜೊತೆಗೆ ನೀನಾಸಂ ಸಂಸ್ಥೆಯ 25ಕ್ಕೂ ರಂಗ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು.

Advertisement
ಇನ್ನುಳಿದಂತೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಸಿ. ಸ್ಯಾಮ್ ಅವರ ಹಿನ್ನೆಲೆ ಸಂಗೀತ ಶಶಿಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
Advertisement