flixOye
Buzz

ಕ್ರಿಸ್ಮಸ್ ಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ರ ಡೆವಿಲ್ ಆಗಮನ!!

ಚಾಲೆಂಜಿಗ್ ಸ್ಟಾರ್ ದರ್ಶನ್ ರವರ ಬಹು ನಿರೀಕ್ಷಿತ ‘ಡೆವಿಲ್ ದಿ ಹೀರೋ’ ಚಿತ್ರ ಫಸ್ಟ್ ಲುಕ್ ಟೀಸರ್ ಅನ್ನು ಚಿತ್ರತಂಡ ಫೆಬ್ರವರಿ 15ನೇ ತಾರೀಖಿನಂದು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿತ್ತು. ಈ ಚಿತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್, ರಚನಾ ರೈ ಮತ್ತು ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಕರಾಗಿದ್ದಾರೆ.

Advertisement

ಈ ಚಿತ್ರ ನವೆಂಬರ್ 2, 2023 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಿತ್ತು, ಆದರೆ ಚಿತ್ರೀಕರಣದ ಸಂಧರ್ಭದಲ್ಲಿ ದರ್ಶನ್ ಗಾಯಗೊಂಡಿದ್ದರಿಂದ, ಚಿತ್ರೀಕರಣವು ವಿಳಂಬವಾಯಿತು. ದರ್ಶನ್ ಚೇತರಿಸಿಕೊಂಡ ನಂತರ ಚಿತ್ರೀಕರಣವು ಮರು ಪ್ರಾರಂಭವಾಯಿತು.

 

ಚಿತ್ರದ ಮೊದಲ ಟೀಸರ್‌ ಅನ್ನು ದರ್ಶನ್‌ ರವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಡೈಲಾಗ್ಸ್‌, ಉತ್ತಮ ಸಂಭಾಷಣೆ ಮತ್ತು ಆಕ್ಷನ್‌ ಸೀಕ್ವೆನ್ಸ್‌ ನಿಂದ ಚಿತ್ರದ ಟೀಸರ್‌ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಮೊದಲನೇ ಟೀಸರ್ 3,582,326 ವೀಕ್ಷಣೆಗಳಿಂದ ಯಶಸ್ಸನ್ನು ಕಂಡಿತ್ತು.  ಆ ಟೀಸರ್ ಇಲ್ಲಿದೆ:

https://youtu.be/TLxvZTmo7E4?si=si4OLmgX8EuRdat5

ಚಿತ್ರದ BTS ವೀಡಿಯೊವನ್ನು 10 ಮೇ 2024 ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದು, ದರ್ಶನ್‌ ರವರ ನಟನೆಯಿಂದ ಅಭಿಮಾನಿಗಳಲ್ಲಿ ಚಿತ್ರವನ್ನು ನೋಡುವ ಕಾತುರ ಹೆಚ್ಚಾಗಿದೆ.

ಡೆವಿಲ್‌ ದಿ ಹೀರೋ ಚಿತ್ರದ ನಿರ್ದೇಶನವನ್ನು ಪ್ರಕಾಶ್‌ ವೀರ್‌ ಹಾಗೂ ಜೆ ಜಯಮ್ಮ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಚಾಲೆಂಜಿಗ್‌ ಸ್ಟಾರ್ ದರ್ಶನ್‌ ನಾಯಕರಾಗಿ ನಟಿಸಿದ್ದರೆ, ರಚನಾ ರೈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರಾಗಿ ಬಿ ಅಜನೀಶ್ ಲೋಕನಾಥ್, ಡಿಒಪಿ -ಸುಧಾಕರ್ ಎಸ್ ರಾಜ್, ಕಲಾ ನಿರ್ದೇಶಕರಾಗಿ ಮೋಹನ್ ಬಿ ಕೆರೆ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

Advertisement

23 ಮೇ 2024 ರಂದು ಚಿತ್ರತಂಡ ಬಿಡುಗಡೆಯ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಎಲ್ಲಾ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆಯನ್ನು ಮಾಡಿತ್ತು, ಡೆವಿಲ್‌ ಚಿತ್ರವನ್ನು ಇದೇ ಕ್ರಿಸ್ಮಸ್‌ 2024ರಂದು ಬೆಳ್ಳಿತೆರೆಗೆ ಬರಲಿದೆ ಎಂಬ ಸಿಹಿ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

 

 

ಸಂಬಂಧಿತ · Related