ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ರವರು ರಿಯಾ ಚಕ್ರವರ್ತಿ ವಿರುದ್ಧ ಪಟನಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸುಶಾಂತ್ ಖಾತೆಯಿಂದ 15ಕೋಟಿ ಹಣವನ್ನು ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದಾಳೆ. ಹಾಗೂ ಸುಶಾಂತ್ ಆತ್ಮಹತ್ಯೆ ಗೆ ಪ್ರಚೋದಿಸಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದರು. ಹಾಗೂ ತನ್ನ ಮಗನ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೇಳಿದ್ದರು. ಈಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಬೇಕೆಂದು ಇಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ರಿಯಾ ಚಕ್ರವರ್ತಿ ಸಲ್ಲಿಸಿದ ಪಿಟಿಷನ್ನಲ್ಲಿ ಇದ್ದ ಅಂಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಎಲ್ಲ ಅಧಿಕಾರವೂ ಬಿಹಾರ್ ಸರಕಾರ ಕ್ಕೆ ಇದೆ. ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಸಿಬಿಐಗೆ ಸಹಕಾರ ನೀಡಬೇಕೆಂದು ಆದೇಶಿಸಿದೆ. ಇದರಿಂದ ರಿಯಾ ಚಕ್ರವರ್ತಿ ಮತ್ತು ಮುಂಬೈ ಪೋಲಿಸ್ ರಿಗೆ ದೊಡ್ಡ ತಲೆ ನೋವಾಗಿದೆ. ಈಗ ಸಿಬಿಐ ತನಿಖೆಯನ್ನು ಆಗ್ರಹಿಸುತ್ತ ಬಂದಿದ್ದ ಸುಶಾಂತ್ ಕುಟುಂಬ ಹಾಗೂ ಅವರ ಅಭಿಮಾನಿಗಳ ಧನಿಗೆ ಮನ್ನಣೆ ಸಿಕ್ಕಿದಂತಾಗಿದೆ.
ಸಂಬಂಧಿತ · Related
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7
Buzz
Lo Naveena Now Streaming on Amazon Prime Video