ಬಿಚ್ಚುಗತ್ತಿಗೆ ಬಂತು ಬಂಪರ್ ಬೆಲೆ.. ಭಾರಿ ಮೊತ್ತಕ್ಕೆ ಹರಿ ಸಂತು ಚಿತ್ರಕ್ಕೆ ಬೇಡಿಕೆ..!!

Published on

379 Views
Advertisement

ಕನ್ನಡ. ಸಿನಿಮಾರಂಗದಲ್ಲಿ ರಿಲೀಸ್ಗೂ ಮೊದ್ಲೇ ಬಿಚ್ಚುಗತ್ತಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಟೀಸರ್ ಮತ್ತು ಹಾಡಿನಿಂದ ಮಾತ್ರವಲ್ಲದೇ ಬ್ಯುಸಿನೆಸ್ ವಿಚಾರವಾಗಿ, ಬಿಚ್ಚುಗತ್ತಿ ಚಾಪ್ಟರ್ 1 ಸಿನಿಮಾ ಸದ್ದು ಮಾಡ್ತಿದೆ.. ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಬ್ಯುಸಿನೆಸ್ ಮಾತುಕತೆ ಮಾಡ್ತಿದೆ ಬಿಚ್ಚುಗತ್ತಿ ಚಿತ್ರ. ಐತಿಹಾಸಿಕ ಸಿನಿಮಾ ಆಗಿರೋದ್ರಿಂದ ಮತ್ತು ಆಕ್ಷನ್ ಬೇಸ್ಡ್ ಆಗಿರೋದ್ರಿಂದ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅದ್ರಂತೆ, ಇತ್ತೀಚೆಗಷ್ಟೇ ಬಿಚ್ಚುಗತ್ತಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೊಬ್ಬರಿ 3 ಕೋಟಿ. 20 ಲಕ್ಷಕ್ಕೆ ಮಾರಾಟದ ಮಾತುಕಥೆಯಾಗಿದೆ.

Advertisement

ಚಿತ್ರತಂಡದ ಮೂಲಗಳು ಹೇಳೋ ಪ್ರಕಾರ. ಒಬ್ಬ ಹೊಸನಾಯಕನಟ ಸಿನಿಮಾ ಡಬ್ಬಿಂಗ್ ಗೇನೆ ಈ ಮಟ್ಟಗೆ ಬ್ಯುಸಿನೆಸ್ ಮಾಡೋದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್ ಅಂತೆ ಐತಿಹಾಸಿಕ ಆಕ್ಷನ್ ಸಿನಿಮಾಗಳಿಗೆ ಡಬ್ಬಿಂಗ್ ಏರಿಯಾದಲ್ಲಿ ದೊಡ್ಡ ಮಾರುಕಟ್ಟೆ ಇದ್ದು, ಹರಿ ಸಂತು ಸಿನಿಮಾಗೆ ಫ್ಲಸ್ ಪಾಯಿಂಟ್ ಆಗಿದೆ. ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಈ ವಿಚಾರವಾಗಿ ಬಿಚ್ಚುಗತ್ತಿ ಭಾರಿ ಸದ್ದು ಸುದ್ದಿಯಾಗ್ತಿದೆ.

Advertisement

ಇದರ ಜೊತೆಗೆ ಇತ್ತೀಚೆಗೆ ದುರ್ಗದ ಹೆಬ್ಬುಲಿ ಅನ್ನೋ ಹಾಡಿನ ಲಿರಿಕಲ್ ವಿಡಿಯೋ ಚಿತ್ರತಂಡ ರಿಲೀಸ್ ಮಾಡಿದ್ದು, ಈ ಹಾಡು ಚಿತ್ರದ ಹೈಲೈಟ್ ಗಳಲ್ಲೊಂದಾಗಿ ಕಾಣ್ತಿದೆ. ನಕುಲ್ ಸಂಗೀತ, ವಿ. ನಾಗೇಂದ್ರ ಪ್ರಸಾದ್ ಸಂಗೀತ ಮಾಸ್ ಆಗಿದೆ. ಹೈ ಎನರ್ಜಿಟಿಕ್ ಆಗಿದೆ. ಯುದ್ಧಕ್ಕೆ ಸನ್ನಾದ್ಧರಾಗೋ ಯೋಧರರನ್ನ ಪ್ರೇರೇಪಿಸೋ ಹಾಡು ಕೇಳೋದಕ್ಕೆ ಸಖತ್ ಎಕ್ಸೈಟಿಂಗ್ ಆಗಿದೆ.

Advertisement

ಬಿಚ್ಚುಗತ್ತಿ ಚಾಪ್ಟರ್ 1… ಚಿತ್ರದುರ್ಗದ ಇತಿಹಾಸ ಪುಟಗಳಲ್ಲಿ ಎಂದೂ ಅಳಿಯದ ಗುರುತಾಗಿ ಉಳಿದಿರೋ ದಳವಾಯಿ ದಂಗೆಯ ಭಾಗ1ರ ಚಿತ್ರಣ. ಬಿ.ಎಲ್ ವೇಣು ಅವ್ರ ಕಥೆ ಮತ್ತು ಸಂಭಾಷಣೆ ರಚಿಸಿರೋ ಈ ಐತಿಹಾಸಕ ಚಿತ್ರವನ್ನ ಸ್ಯಾಂಡಲ್ವುಡ್ ಅಂಗಳದಲ್ಲಿ ವೆರೈಟಿ ಸಿನಿಮಾಗಳಿಂದ ಜನಪ್ರಿಯರಾಗಿರೋ ನಿರ್ದೇಶಕ ಹರಿ ಸಂತು ನಿರ್ದೇಶನ ಮಾಡಿದ್ದಾರೆ. ಓಂ ಸಾ. ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗಿರೋ ಅದ್ಧೂರಿ ಐತಿಹಾಸಿ�

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com