flixOye
Buzz

ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಪತ್ರಿಕಾ ಸಂಪರ್ಕಾಧಿಕಾರಿ (PRO) ಗಳಿಂದ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಬಡ್ಡೀಸ್ ಚಿತ್ರತಂಡ

ಕನ್ನಡ ಚಿತ್ರರಂಗದ ಹಿರಿಯ ಪತ್ರಿಕಾ ಸಂಪರ್ಕಾಧಿಕಾರಿ (PRO) ಗಳಾದ ನಾಗೇಂದ್ರ , ಸುಧೀಂದ್ರ ವೆಂಕಟೇಶ್, ವಿಜಯ್ ಕುಮಾರ್, ಹರೀಶ್ ಅವರುಗಳು ಬಡ್ಡೀಸ್ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದರು.

ತವಿಶ್ ಎಂಟರ್ಪ್ರೈಸಸ್
ಡಯಲ್ ಆರ್ಟಿಸ್ಟ್ಸ್ ಪ್ರೆಸೆಂಟ್ಸ್
ಡೈರೆಕ್ಟರ್ : ಗುರುವೇಂದ್ರ ಶೆಟ್ಟಿ
ನಿರ್ಮಾಪಕರು ರಾಮಕೃಷ್ಣ ಶೆಟ್ಟಿ
ನಾಯಕ ಕಿರಣ್ ರಾಜ್

ತಂತ್ರಜ್ಞರ ತಂಡ
ರಿಶಾನ್ T, ಮಧು ಹೆಗಡೆ, ಶಂಕರ್, ವೆಂಕಿ udv, ವೈಭವ್ ನಾಗರಾಜ್, ನಿರಂಜನ್ ಶೆಟ್ಟಿ, ಸುಧೀಂದ್ರ ವೆಂಕಟೇಶ್

Advertisement

ತವಿಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಇಂದು ಬಡ್ಡೀಸ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಕಿನ್ನರಿ, ಕನ್ನಡತಿ ಧಾರವಾಹಿ ಖ್ಯಾತಿಯ ಕಿರಣ್ ರಾಜ್ ಚಿತ್ರದ ನಾಯಕ. ನಾಯಕಿ ಯ ಜತೆ ಉಳಿದ ತಾರಾಗಣದ ಹುಡುಕಾಟ ನಡೆಯುತ್ತಿದೆ.

ಚಿತ್ರದಲ್ಲಿ 2 ಹಾಡುಗಳಿದ್ದು ಮಧು ಹೆಗಡೆ ಎಂಬ ಹೊಸ ಸಂಗೀತ ನಿರ್ದೇಶಕರ ಪರಿಚಯ ಆಗುತ್ತಿದೆ. ಬಡ್ಡೀಸ್ ಆತ್ಮೀಯ ಸ್ನೇಹಿತರ ಕತೆಯಾಗಿದ್ದು ಫ್ರೆಂಡ್ಶಿಪ್ ವ್ಯಾಲ್ಯೂ ಬಗ್ಗೆ ಇರುವ ಕತೆಯಲ್ಲಿ ಮನರಂಜನಾತ್ಮಕವಾಗಿ ಚಿತ್ರಕತೆ ಹೆಣೆಯಲಾಗಿದೆ. ಮುಂದಿನ ಮೇ ತಿಂಗಳಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

ತುಳು ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ಶೆಟ್ಟಿ ಅವರಿಗೆ ನಿರ್ಮಾಪಕರಾಗಿ ಕನ್ನಡದಲ್ಲಿ ಮೊದಲ ಚಿತ್ರ.

ಗುರುವೇಂದ್ರ ಶೆಟ್ಟಿ ಚಿತ್ರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಹಿಂದೆ 5G ಚಿತ್ರ ನಿರ್ದೇಶಿಸಿದ್ದ ಅವರು ಚಿತ್ರಗಳಿಗೆ ಸಂಭಾಷಣೆಕಾರ ಹಾಗೂ ಬರಹಗಾರ ಆಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ ಗುರುವೇಂದ್ರ ಅವರಿಗೆ ಇದು ಮೂರನೇ ಚಿತ್ರ

ಸಂಬಂಧಿತ · Related