“ಬ್ರಹ್ಮಾಸ್ತ್ರ” ದಲ್ಲಿ “ಶಿವರಾತ್ರಿ” ಇಂದು ರಾತ್ರಿ 8ಕ್ಕೆ

Published on

552 Views
Advertisement

ಉದಯ ಟಿವಿ ತನ್ನ ಹೊಸ ಹೊಸ ಪ್ರಯೋಗಗಳಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿಗೆ ಶುರುವಾಗಿರೋ ಹೊಸ ಧಾರಾವಾಹಿ ಬ್ರಹ್ಮಾಸ್ತ್ರ ವಿಭಿನ್ನವಾಗಿದ್ದೂ ಆಗಲೇ ಶಿವರಾತ್ರಿಯ ವಿಶೇಷ ಸಂಚಿಕೆಯನ್ನ ನೀಡಲು ಮುಂದಾಗಿದೆ. ನಿರ್ಮಾಪಕ ರವಿ ಆರ್ ಗರಣಿ ಅವರ ಸಾರಥ್ಯದಲ್ಲಿ ಮೂಡಿ ಬರ್ತಿರೋ ಈ ಧಾರಾವಾಹಿ ಈಗಾಗಲೇ ಕರುನಾಡಿನ ಮುದ್ದು ಮನಸ್ಸುಗಳನ್ನ ಗೆದ್ದು ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಭಾಷೆ ಪ್ರಾಯೋಗಿಕತೆ ಶೈಲಿ, ನಿರ್ಮಾಣ, ನಿರ್ದೇಶನ, ಸಂಭಾಷಣೆ ಹೀಗೆ ಎಲ್ಲದರಲ್ಲೂ ಕ್ರಿಯಾತ್ಮಕವಾಗಿದೆ ಎಂಬುವುದು ನೋಡುಗರ ಅಭಿಪ್ರಾಯವಾಗಿದೆ.

ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ನಡುವೆ ನಡೆಯೋ ಪ್ರೇಮಕಥೆ ಬ್ರಹ್ಮಾಸ್ತ್ರ. ಅಜ್ಜಿ ಅಲಮೇಲಮ್ಮ ತನ್ನನ್ನು ಕಟುಕನಿಗೆ ಮದ್ವೆ ಮಾಡುವ ನಿರ್ಧಾರ ಮಾಡಿದ್ದಾರೆಂಬ ಕಾರಣಕ್ಕೆ ನಾಯಕಿ ಶಿವರಂಜಿನಿ ಆಂದ್ರದಿಂದ ತಪ್ಪಿ ಬೆಂಗ್ಳೂರಿಗೆ ಬರುತ್ತಾಳೆ. ಇಲ್ಲಿ ಅನೀರಿಕ್ಷಿತವಾಗಿ ನಾಯಕ ಸಂತೋಷನ ಭೇಟಿಯಾಗಿ ಅವನ ಮನೆಯಲ್ಲಿರೋ ಪರಿಸ್ಥಿತಿ ಎದುರಾಗುತ್ತದೆ. ವಿಧಿ ಲಿಖಿತವೆಂಬಂತೆ ಶಿವರಂಜಿನಿ ತನ್ನ ಅತ್ತೆ ಕೃಷ್ಣವೇಣಿ ಮನೆಗೇ ಬಂದಿರುತ್ತಾಳೆ. ಈ ವಿಷ್ಯವನ್ನು ನಾಯಕಿ ನಾಯಕನಿಗೂ ಹೇಳದೆ ಕದ್ದು ಅವನ ಮನೆಯಲ್ಲೇ ಬಚ್ಚಿರುತ್ತಾಳೆ. ಆದರೆ ಈ ಶಿವರಾತ್ರಿ ಹಬ್ಬದಂದು ಮನೆಯಲ್ಲಿ ಅಡಗಿರೋ ಶಿವರಂಜಿನಿ ಸಿಕ್ಕಿ ಬೀಳುವಳೇ ಎಂಬುವುದು ಮುಂದಿನ ಕುತೂಹಲ.

Advertisement

ಎಲ್ಲರಿಗೂ ಗೊತ್ತಿರುವಂತೆ ನಾಯಕ ಸಂತೋಷನದ್ದು ಪ್ರೀತಿ, ಖುಷಿ ಸಂತಸಗಳೇ ತುಂಬಿರುವ ಪುಟ್ಟ ಕೂಡು ಕುಟುಂಬ. ಶಿವರಾತ್ರಿಯ ಜಾಗರಣೆ ವಿಶೇಷಕ್ಕೆ ಈ ಕುಟುಂಬ ಒಂದೊಂದು ವೇಷಗಳನ್ನು ತೊಟ್ಟು ವೀಕ್ಷಕರಿಗೆ ಮನರಂಜಿಸಲು ಸಜ್ಜಾಗಿದೆ.

ವೇಣು ಪಾತ್ರ ಮಾಡ್ತಿರೋ ಅಶೋಕ್ ಹೆಗಡೆಯವರು ಮೊದಲಬಾರಿಗೆ ಸ್ತ್ರೀ ವೇಷ ತೊಟ್ಟು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಕತ್ತಿ ಗುರಾಣಿಯ ಹಿಡಿದು ಬ್ರಿಟಿಷರೆದುರು ಹೊಡೆಯೋ ಡೈಲಾಗ್ ಅದ್ಭುತವಾಗಿ ಮೂಡಿಬಂದಿದೆ.

Advertisement

ನಾಯಕನ ತಾಯಿ ಕೃಷ್ಣವೇಣಿ ಪಾತ್ರ ನಿರ್ವಹಿಸವ ತ್ರಿವೇಣಿಯವರು ಹಿರಣ್ಯ ಕಶ್ಯಪುವಿನ ವೇಷ ತೊಟ್ಟು ತಮ್ಮ ಪ್ರತಿಭೇಯನ್ನ ಈ ಮೂಲಕ ಅನಾವರಣ ಮಾಡಿದ್ದಾರೆ. ಗದೆ ಹಿಡಿದು ನಡೆಯೋ ಅವರ ಗಾಂಭೀರ್ಯ, ಆ ಮಾತಿನ ಗತ್ತು ಇವೆಲ್ಲಾ ಕೇಳುವುದಕ್ಕಿಂತ ನೋಡಿದರೆ ಸಿಗುವ ಖುಷಿಯೇ ಬೇರೆ.

ರಶ್ಮಿತಾ ಅವರ ಖುಷಿ ಪಾತ್ರದಲ್ಲಿ ಅವರ ಅಭಿನಯ ಕಂಡ ನಮಗೆ ಈಗ ಶಿವ ತಾಂಡವ ನೃತ್ಯದ ಮೂಲಕ ಅವರ ನೃತ್ಯ ಪ್ರತಿಭೆಯನ್ನು ಸವಿಯುವ ಅವಕಾಶ ಸಿಕ್ಕಿದೆ.
ಆನಂದ್ ಆಗಿರುವ ಸಿದ್ದು ಬೇಡರ ಕಣ್ಣಪ್ಪ ದೃಶ್ಯದಲ್ಲಿ ಡಾ ರಾಜ್‍ಕುಮಾರ್ ಅವರನ್ನ ನೆನಪಿಸುವಂತೆ ಅಭಿನಯಿಸಿದ್ದಾರೆ. ಹಾಗೂ ಇದಕ್ಕಾಗಿ ಅದಕ್ಕೇ ಒಪ್ಪುವಂತಹ ವೇಷಭೂಷಣ ತೊಟ್ಟು ಪಾತ್ರಕ್ಕೆ ನ್ಯಾಯಒದಗಿಸಿದ್ದಾರೆ.

Advertisement

ಮುಖ್ಯವಾಗಿ ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಪ್ರಿಯಾ ಪಾತ್ರಧಾರಿ ಪಲ್ಲವಿ ಮತ್ತಿಗಟ್ಟ ಇವರು ಪ್ರದರ್ಶಿಸಲಿದ್ದಾರೆ. ಯಕ್ಷಗಾನ ವೇಷಭೂಷಣದೊಂದಿಗೆ ನೃತ್ಯ ಮಾಡುವ ಇವರು ಒಂದು ಕ್ಷಣ ರಂಗು ಮೂಡಿಸುತ್ತಾರೆ.

ಹಾಸ್ಯನಟ ಪವನ್, ರಜನೀಕಾಂತ್ ಮತ್ತು ಮೊನೀಷ್ ಅವರು ಗುರುಶಿಷ್ಯ ಮತ್ತು ಬ್ರಿಟಿಷ್ ಅಧಿಕಾರಿಯ ವೇಷತೊಟ್ಟು ನಗುವಿನ ಕಚಗುಳಿ ಇಡುತ್ತಾರೆ.
ಇವೆಲ್ಲದರ ಜೊತೆಗೆ ಸಂತು ಆಗಿರುವ ಪ್ರಮೋದ್ ಮತ್ತು ಶಿವರಂಜಿನಿಯಾಗಿರುವ ದೀಪಾ ಹಿರೇಮಠ್ ಅವರು ಡ್ಯೂಯೆಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

“ಬ್ರಹ್ಮಾಸ್ತ್ರ” ದಲ್ಲಿ ಶಿವರಾತ್ರಿ ವಿಶೇಷ ಇಂದು ರಾತ್ರಿ 8ಕ್ಕೆ ಉದಯ ಟವಿಯಲ್ಲಿ ಪ್ರಸಾರವಾಗಲಿದೆ

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com