ಉದಯ ಟಿವಿಯಲ್ಲಿ ಪ್ರಿಮೀಯರ್ ಮೂವ್ಹಿ “ಚರ್ಕವರ್ತಿ” ಇದೇ ಭಾನುವಾರ ಸಂಜೆ 6ಕ್ಕೆ

Published on

630 Views
Advertisement

ಉದಯ ಟಿವಿಯಲ್ಲಿ ಪ್ರಿಮೀಯರ್ ಮೂವ್ಹಿ “ಚರ್ಕವರ್ತಿ”
ಇದೇ ಭಾನುವಾರ ಸಂಜೆ 6ಕ್ಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾಯಕಿ ದೀಪಾ ಸನ್ನಿಧಿ ಅಭಿನಯದ ಸೂಪರ್ ಹಿಟ್ ಚಲನಚಿತ್ರ ಚಕ್ರವರ್ತಿ ಇದೇ ಭಾನುವಾರ ಸಂಜೆ 6ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

2017ರಲ್ಲಿ ಬಿಡುಗಡೆಯಾದ ಚಕ್ರವರ್ತಿ ಚಲನಚಿತ್ರ ಕನ್ನಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಾಸ್ ಹಿರೋ ಆಗಿ ದರ್ಶನ್ ತನ್ನ ಅಭಿಮಾನಿಗಳಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದ್ರು. ನಿರ್ದೇಶಕ ಚಿಂತನ್ ಈ ಚಿತ್ರದಲ್ಲಿ ದರ್ಶನ್‍ಗೆ ನಾಲ್ಕು ರೀತಿಯ ವಿವಿಧ ಪಾತ್ರವನ್ನು ರಚಿಸಿದ್ದು ನಾಯಕನಾಗಿ ದರ್ಶನ್ ಅದ್ಬುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದು ಈ ಚಿತ್ರದ ವಿಶೇಷ.

Advertisement

ಈ ಚಿತ್ರದಲ್ಲಿ ನಾಯಕನಾಗಿ ದರ್ಶನ್ ಮೊದಲಾರ್ಧದಲ್ಲಿ ಸಾಧುವಾಗಿ ಗಮನ ಸೆಳೆದರೆ ದ್ವಿತಿಯಾರ್ಧದಲ್ಲಿ ಭೂಗತಲೋಕದ ದೊರೆಯಾಗಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಾರೆ. ನಾಯಕ ದರ್ಶನ್ ಈ ಚಿತ್ರದಲ್ಲಿ ನಿವೃತ್ತ ಸೈನಿಕನ ಮಗನಾಗಿದ್ದು, ಕೆಲಸ ಹುಡುಕಿ ಬೆಂಗಳೂರಿಗೆ ಬರುತ್ತಾನೆ. ಆದರೆ ಬೆಂಗಳೂರಿನಲ್ಲಿ ಅಚಾನಕ್ಕಾಗಿ ನಡೆವ ಕೆಲವು ಘಟನೆಯಿಂದ ನಾಯಕ ನಂತರ ದೊಡ್ಡ ಭೂಗತ ದೊರೆಯಾಗಿ ಬೆಳೆಯುತ್ತಾನೆ. ಇದು ಆತನ ಕುಟುಂಬಕ್ಕೆ ಗೊತ್ತಿರುವುದಿಲ್ಲ. ಆದರೆ ಸತ್ಯಾಂಶ ತಿಳಿದ ನಂತರ ಅವರು ನಾಯಕನನ್ನು ಕುಟುಂಬದಿಂದ ದೂರಮಾಡುತ್ತಾರೆ. ಕೊನೆಗೆ ನಾಯಕಿ ತನ್ನ ಪ್ರಯತ್ನದಿಂದ ನಾಯಕನನ್ನು ಮತ್ತೆ ಕುಟುಂಬಕ್ಕೆ ಹತ್ತಿರಾಗಿಸುತ್ತಾಳ..? ನಾಯಕ ಭೂಗತ ಲೋಕದ ಎಲ್ಲಾ ಡಾನ್‍ಗಳನ್ನು ಹೇಗೆ ಮುಗಿಸುತ್ತಾನೆ ಎಂಬುದು ಈ ಚಿತ್ರದ ತಿರುಳು.

ನಾಯಕನಾಗಿ ನಾಲ್ಕು ವಿಭಿನ್ನ ಶೇಡ್‍ಗಳಲ್ಲಿ ನಟಿಸಿರುವ ದರ್ಶನ ತನ್ನ ಚತುರ ಅಭಿನಯದಿಂದಾಗಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿಯಾಗಿ ದೀಪಾ ಸನ್ನಿಧಿ ಗಮನ ಸೆಳೆದರೆ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್ ಸೇರಿದಂತೆ ಚಿತ್ರದ ಉಳಿದ ಪಾತ್ರಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೆ, ಚಿತ್ರದ ನಿರ್ದೇಶಕ ಎ.ವಿ. ಚಿಂತನ್ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನೂ ಸಂಗೀತ ನಿರ್ದೇಶಕ ಅರ್ಜುನ್ ಕೈಚಳಕದಲ್ಲಿ ಮೂಡಿಬಂದಿರುವ “ಒಂದು ಮಳೆಬಿಲ್ಲು” ಎಂಬ ಹಾಡು ಚಿತ್ರ ಮುಗಿದ ನಂತರವೂ ಜನರ ನಾಲಗೆಯ ಮೇಲೆ ಹರಿದಾಡುತ್ತಿರುವುದು ಹಾಗೂ ಆಲ್ ಟೈಮ್ ಸೂಪರ್ ಹಿಟ್ ಹಾಡು ಎಂದು ಹೆಸರು ಪಡೆದಿರುವುದು ಈ ಚಿತ್ರದ ಮತ್ತೊಂದು ವಿಶೇಷ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com