ಸಪ್ತಪದಿ ತುಳಿದ ಬಿಗ್ ಬಾಸ್ ಬೆಡಗಿ ಸ್ನೇಹಾ..
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ನೇ ಆವೃತ್ತಿಯಲ್ಲಿ ಭಾಗವಹಿಸಿ, ಮೂರನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದ ಸ್ನೇಹ ಆಚಾರ್ಯ ಮದುವೆ ತಾನು ಇಷ್ಟಪಟ್ಟ ಹುಡುಗ ಅಮೇರಿಕಾದ ರಾಯನ್ ಜೊತೆಗೆ ಅದ್ಧೂರಿಯಾಗಿ ನೆರವೇರಿದೆ. ಸ್ನೇಹ ಆಚಾರ್ಯ ಬಿಗ್ ಬಾಸ್ ಗೆ ಬರುವ ಮುಂಚೆಯೆ ಮದುವೆ ದಿನ ನಿಗದಿಯಾಗಿತ್ತು.
ರಾಯನ್ ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ನವೆಂಬರ್ 25ರಂದು ಈ ಜೋಡಿಯ ಮದುವೆ ಹಿಂದು ಸಂಪ್ರದಾಯದಂತೆ ಮೈಸೂರು ರಸ್ತೆಯಲ್ಲಿರುವ ಎಂ.ಸಿರಿ ಕನ್ವೆನ್ಷನ್ ಹಾಲ್ ನಲ್ಲಿ ನೆರವೇರಿತು.
Advertisement
Advertisement
