ಹೌದು ಸ್ವಾಮಿ ಅಸಲಿ ಆಟ ಶುರು…. 100 ದಿನ…17 ಸ್ಪರ್ಧಿಗಳು ಗೆಲ್ಲೋದ್ಯಾರು….?

Published on

533 Views
Advertisement

ಕನ್ನಡ ಕಿರುತೆರೆ‌‌ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ನಿನ್ನೆ ಅದ್ಧೂರಿಯಾಗಿ ಲಾಂಚ್ ಆಗಿದ್ದು, ಒಟ್ಟು 17 ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಟಿಕ್ ಟಾಕ್ ಸ್ಟಾರ್, ಸೀರಿಯಲ್ ಸ್ಟಾರ್, ಬಿಗ್ ಸ್ಕ್ರೀನ್ ಸ್ಟಾರ್, ಸಿಂಗರ್ ಎಲ್ಲರೂ ಬಿಗ್ ಬಾಸ್ ಹೌಸ್ ನಲ್ಲಿ ಲಾಕ್ ಆಗಿದ್ದಾರೆ.
ಹಾಗಿದ್ರೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟೊರುವ 17 ಸ್ಪರ್ಧಿಗಳ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ…


1.ಟಿಕ್ ಟಾಕ್ ಸ್ಟಾರ್ ಧನುಶ್ರೀ

Advertisement

ಟಿಕ್‌ಟಾಕ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ ಧನುಶ್ರೀ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ಹಾಸನದ ಹಳೇಬಿಡಿನ ಹುಡ್ಗಿಯಾದ ಇವ್ರು, ಐಟಿ ಕಂಪನಿ ಉದ್ಯೋಗಿಯಾಗಿ ಕೆಲಸ ಮಾಡ್ತಿದ್ದರು.

2. ಶುಭಾ ಪೂಂಜಾ, ನಟಿ

Advertisement

ಕನ್ನಡ ಸಿನಿಮಾ ಇಂಡಸ್ಟ್ರೀಯ ಗ್ಲಾಮರ್ ನಟಿ ಎನಿಸಿಕೊಂಡ ಶುಭಾ ಬಿಗ್ ಬಾಸ್ ಮನೆಯೊಳಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

3.ಶಂಕರ್ ಅಶ್ವಥ್, ಹಿರಿಯ ನಟ

Advertisement

ಕನ್ನಡ ಚಿತ್ರರಂಗದ ಹಿರಿಯ ನಟ. ಸಿನಿಮಾಗಳು ಇಲ್ಲದ ಸಮಯದಲ್ಲಿ ಕ್ಯಾಬ್ ಓಡಿಸಿ ಎಲ್ಲರಿಗೂ ಮಾದರಿಯಾದ ನಟ ಬಿಗ್ ಬಾಸ್ ಮನೆಯೊಳಗೆ ಮೂರನೇ ಸ್ಪರ್ಧಿಯಾಗಿ ಹೋಗಿದ್ದಾರೆ.

4. ವಿಶ್ವನಾಥ್ ಹಾವೇರಿ, ಸಿಂಗರ್
ಉತ್ತರ ಕರ್ನಾಟಕ ಮೂಲದ ಗಾಯಕ. ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಇವ್ರು ನಾಲ್ಕನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

5. ವೈಷ್ಣವಿ ಗೌಡ, ನಟಿ

Advertisement

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ. ಹಲವು ಸಿನಿಮಾಗಳಲ್ಲಿ ನಟಿಸ್ತಿರುವ ವೈಷ್ಣವಿ ಗೌಡ ಬಿಗ್ ಬಾಸ್ 5ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ.

6.ಕೆ.ಪಿ.ಅರವಿಂದ್

ಅಂತಾರಾಷ್ಟ್ರೀಯ ಬೈಕ್ ರೇಸರ್ ಆಗಿ ಗಮನಸೆಳೆದ ಕೆ.ಪಿ.ಅರವಿಂದ್ ಬಿಗ್ ಬಾಸ್ ಮನೆಯೊಳಗೆ ಆರನೇ ಸ್ಪರ್ಧಿಯಾಗಿ ಹೋಗಿದ್ದಾರೆ.

7. ನಿಧಿ ಸುಬ್ಬಯ್ಯ

ಹುಡುಗರು ಬೇಕು ಅಂತಾ ಕನ್ನಡದಲ್ಲಿ ಮಿಂಚಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದ ನಿಧಿ ಸುಬ್ಬಯ್ಯ ದೊಡ್ಮನೆ ಏಳನೇ ಸ್ಪರ್ಧಿಯಾಗಿದ್ದಾರೆ.

8. ಬ್ರೋ ಗೌಡ

ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಸದ್ದು ಮಾಡಿರುವ ಸುಮಂತ್ ಬ್ರೋ ಗೌಡ ಬಿಗ್ ಬಾಸ್ ಎಂಟನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

9.ಗೀತಾ ಭಾರತಿ ಭಟ್

ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗೀತಾ ಭಾರತಿ ಭಟ್ ಬಿಗ್ ಬಾಸ್ ಒಂಭತ್ತನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

10.ಮಂಜು ಪಾವಗಡ

‘ಮಜಾ ಭಾರತ’ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದುಕೊಂಡಿರುವ ಮಂಜು ಪಾವಗಡ ಬಿಗ್ ಬಾಸ್ ಹತ್ತನೇ ಸ್ಪರ್ಧಿಯಾಗಿದ್ದಾರೆ.

11. ದಿವ್ಯಾ ಸುರೇಶ್

ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ನಲ್ಲಿ ಮಿಂಚುತ್ತಿರುವ ಯುವ ನಟಜ ದಿವ್ಯಾ ಬಿಗ್ ಬಾಸ್ 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

12. ಚಂದ್ರ ಕಲಾ ಮೋಹನ್

‘ಪುಟ್ಟಗೌರಿ ಮದುವೆ’, ‘ಕಮಲಿ’, ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚಂದ್ರ ಕಲಾ ಮೋಹನ್ ಬಿಗ್ ಬಾಸ್ ಸೀಸನ್ 8ರ 12ನೇ ಸ್ಪರ್ಧಿಯಾಗಿದ್ದಾರೆ.

13.ರಘು ಗೌಡ

ರಘು ವೈನ್ ಸ್ಟೋರ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಕಾಮಿಡಿ ವಿಡಿಯೋ ಮೂಲಕ ನಕ್ಕು ನಲಿಸುವ ರಘು ಗೌಡ ಬಿಗ್ ಬಾಸ್ ನ 13 ಸ್ಪರ್ಧಿಯಾಗಿದ್ದಾರೆ.

14. ಪ್ರಶಾಂತ್ ಸಂಬರಗಿ

ಸಾಮಾಜಿಕ ಕಾರ್ಯಕರ್ತ, ರಾಷ್ಟ್ರೀವಾದಿಯಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಬಿಗ್ ಬಾಸ್ 14ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

15. ದಿವ್ಯಾ ಉರುಡುಗ

ಕಿರಿತೆರೆ ನಟಿಯಾಗಿ ಮಿಂಚಿದ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿರುವ ದಿವ್ಯಾ ಬಿಗ್ ಬಾಸ್ ನ 15ನೇ ಸ್ಪರ್ಧಿಯಾಗಿದ್ದಾರೆ.

16. ರಾಜೀವ್, ಕ್ರಿಕೆಟಿಗ

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸಿದ್ದ ರಾಜೀವ್, ನಟನಾಗಿಯೂ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಜೀವ್ ಬಿಗ್ ಬಾಸ್ ನ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

17.ನಿರ್ಮಲ ಚೆನ್ನಪ್ಪ

ತಲ್ಲಣ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ’ ಪಡೆದುಕೊಂಡಿರುವ ಪ್ರತಿಭಾವಂತೆ. ಕಿರುತೆರೆಯಲ್ಲಿ ನಟನೆ, ನಿರ್ದೇಶನ ಹಾಗೂ ನಿರ್ಮಾಣ‌ ಮಾಡುತ್ತಿರುವ ನಿರ್ಮಲ ಬಿಗ್ ಬಾಸ್ ನ 17ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಒಟ್ಟು ನೂರು ದಿನದ ಆಟದಲ್ಲಿ ಗೆಲ್ಲೋದ್ಯಾರು ಅನ್ನೋದು ಕಾದು ನೋಡ್ಬೇಕು.

More Buzz

Buzz 7 days ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 1 week ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 1 week ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 1 week ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 1 week ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 1 week ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 1 week ago

Massa Massa Lyrical Video Drops: Ram Charan & Janhvi Ignite Screens for Peddi

Short Films 1 week ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 1 week ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 1 week ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 1 week ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 1 week ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com