ಬಿಗ್ ಬಾಸ್ ಸ್ಪರ್ಧಿ ಜಗನ್ ನಿಶ್ಚಿತಾರ್ಥ
ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಗನ್ ‘ಜೋಶ್ ‘ ಸಿನಿಮಾದ ಮೂಲಕ ಜನರಿಗೆ ಪರಿಚಯವಾದವರು. ನಂತರ ‘ಗಾಂಧಾರಿ’ ಸೀರಿಯಲ್ ಮೂಲಕ ಮನೆಮಾತಾದರು. ಸದ್ಯ ಈಗ ‘ಸೀತಾ ವಲ್ಲಭ’ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅದರ ಮಧ್ಯೆ ಒಂದು ದೊಡ್ಡ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿಯೂ ಸುದ್ದಿ ಇದೆ.

Advertisement
ಇವೆಲ್ಲದರ ನಡುವೆ ಜಗನ್ನಾಥ್ ಚಂದ್ರಶೇಖರ್ ಗೆ ಕಂಕಣ ಭಾಗ್ಯ ಕೂಡಿ ಬಂದಿದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಜಗನ್. ಕುಟುಂಬಸ್ಥರ ಸಮ್ಮುಖದಲ್ಲಿ ಗೆಳತಿ ರಕ್ಷಿತಾ ಮುನಿಯಪ್ಪ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಜಗನ್ – ರಕ್ಷಿತಾ ವಿವಾಹ ಮಹೋತ್ಸವ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.
Advertisement