ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ “ರೇಮೊ” ನವೆಂಬರ್ 25ರಂದು ಬಿಡುಗಡೆ

Published on

287 Views

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸಿ.ಆರ್. ಮನೋಹರ್ ಅವರ ನಿರ್ಮಾಣದ , ಉತ್ತಮ ಪ್ರೇಮಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ನಿರ್ದೇಶನದ ಹಾಗೂ ಸುರದ್ರೂಪಿ ನಟ ಇಶಾನ್ – ಚೆಲುವೆ ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ನಟಿಸಿರುವ, ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ “ರೇಮೊ” ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿ.ಆರ್.ಗೋಪಿ ಈ ಚಿತ್ರದ ಸಹ ನಿರ್ಮಾಪಕರು.
ನಾನು ಮೊದಲ ಬಾರಿ ಇಶಾನ್ ಅವರನ್ನು ಭೇಟಿ ಮಾಡಿದ್ದು ದುಬೈನಲ್ಲಿ. ಇಷ್ಟು ಚೆನ್ನಾಗಿದ್ದಾರೆ. ಇವರನ್ನು ಹೀರೋ ಮಾಡಬೇಕು ಅಂದು ಕೊಂಡೆ. ನಂತರ “ರೇಮೊ” ಚಿತ್ರದ ಕಥೆ ಬರೆದೆ. 2019ರಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಯಿತು. ಆನಂತರ ಹೈದರಾಬಾದ್, ಜಮ್ಮು-ಕಾಶ್ಮೀರ, ಸೌತ್ ಆಫ್ರಿಕಾ, ಸಿಂಗಾಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಯಿತು.

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ.
ಇಶಾನ್ – ಆಶಿಕಾ ರಂಗನಾಥ್ ಅವರ ಸುಂದರ ಜೋಡಿಯನ್ನು ತೆರೆ ಮೇಲೆ ನೋಡಿದವರು ಫಿದಾ ಆಗುವುದು ಖಂಡಿತಾ. ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ರೇಮೊ” ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.

ಸದ್ಯದಲ್ಲೇ ಲಿರಿಕಲ್ ಸಾಂಗ್, ಒಂದು ವಿಡಿಯೋ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತೇವೆ.
“ರೇಮೊ” ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ನವೆಂಬರ್ 25 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ತೆರೆಯ ಮೇಲೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ನೀವೆಲ್ಲರು ನೋಡಿ ಹರಿಸಿ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.

More Buzz

BuzzGalleryHistoryVideos 9 hours ago

ವೀಡಿಯೋ ನೋಡಿ – ರಿಷಭ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ ಆರ್.ಸಿ.ಬಿ ಯ ಸ್ಟಾರ್ ಬೌಲರ್ ಸಿರಾಜ್!!

BuzzComedyfilm of the dayFull MoviesGalleryHistoryTrailersVideos 10 hours ago

ಸ್ಯಾಂಡಲ್ ವುಡ್ ನಲ್ಲಿ ರೀ-ರಿಲೀಸ್ ಟ್ರೆಂಡ್!!

Buzzfilm of the dayFull MoviesGalleryHistoryKollywood BuzzShort FilmsTollywood BuzzTrailersVideosWeb Series 4 days ago

ಪ್ರಭಾಸ್ ನ ಕಲ್ಕಿ ಚಿತ್ರಕ್ಕೆ ಧ್ವನಿ ನೀಡಿದ ಮಹಾನಟಿ ಕೀರ್ತಿ ಸುರೇಶ್!!

BuzzFull MoviesGalleryHistoryTollywood BuzzTrailersVideos 4 days ago

ಟಾಲಿವುಡ್ ಸ್ಟಾರ್ ಸೂರ್ಯನಿಗೆ ನಾಯಕಿಯಾದ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ!!

BuzzFull MoviesTollywood BuzzTrailersVideos 4 days ago

ಡಾರ್ಲಿಂಗ್ ಪ್ರಭಾಸ್ ಜೀವನದಲ್ಲಿ ತುಂಬಾ ವಿಶೇಷವಾದ ವ್ಯಕ್ತಿಯ ಎಂಟ್ರಿ- ಇವರೇ ಆ ವ್ಯಕ್ತಿ

BuzzVideos 4 days ago

ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ???

Buzzfilm of the dayFull MoviesTrailers 4 days ago

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಟ್ರೆಂಡ್ ಆಗಿದ್ದೇಕೆ??

Trailers 4 months ago

UITheMovie – First Look Teaser | Upendra | Lahari Films

Buzz 5 months ago

TOXIC – Rocking Star Yash | Geetu Mohandas | KVN Productions

Buzz 8 months ago

Ghost Official Trailer Starring Dr.Shivarajkumar

Trailers 9 months ago

KADDHA CHITRA – TRAILER | VIJAY RAGHAVENDRA | SUHAS KRISHNA

Trailers 9 months ago

Tatsama Tadbhava Official Trailer | Meghana Raj Sarja | Prajwal Devaraj| Vasuki Vaibhav

Copyright ©2024 . All Rights Reserved. privacy | terms Whatsapp: 9538193653 Email: hello@flixoye.com