ನೀವು ಮೆಚ್ಚಿದ ಬೆಂಗಳೂರ್ ಡೇಸ್ ಚಿತ್ರಕ್ಕೆ ಮಹಾಸಂಭ್ರಮ – ಥ್ಯಾಂಕ್ಸ್ ಹೇಳಿದ ಚಿತ್ರತಂಡ

Published on

672 Views
Advertisement

ಯುವಕರಲ್ಲಿ ಹೊಸ ಕ್ರೇಜ್ ಅನ್ನೇ ಹುಟ್ಟಿಸಿದ್ದ ಬೆಂಗಳೂರು ಡೇಸ್ ಚಿತ್ರಕ್ಕೆ 10 ವರ್ಷದ ಸಂಭ್ರಮದ ಜೊತೆ ನಟ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿ!!
ಏನಿದು ಸಿಹಿ ಸುದ್ದಿ?? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Advertisement

ದುಲ್ಕರ್‌ ಸಲ್ಮಾನ್‌ ನಟನೆಯ ಬೆಂಗಳೂರು ಡೇಸ್‌ ಚಿತ್ರವು 2014ರ ಮಲಯಾಳಂ ಭಾಷೆಯ ಹಾಸ್ಯ- ರೊಮ್ಯಾಂಟಿಕ್ ಚಲನಚಿತ್ರ. ಅಂಜಲಿ ಮೆನನ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್‌, ನಿವಿನ್‌ ಪೌಲಿ, ಫಹದ್‌ ಫಾಸಿಲ್‌, ನಜ್ರಿಯಾ ನಾಜಿಮ್‌, ಪಾರ್ವತಿ ತಿರುವೋತ್ತು, ಇಶಾ ತಲ್ವಾರ್ ಮತ್ತು ಪ್ಯಾರಿಸ್‌ ಲಕ್ಷ್ಮಿ ರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಿತ್ಯ ಮೆನನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Advertisement

ಚಿತ್ರವು 30 ಮೇ 2014 ರಂದು 205 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು ಹಾಗೂ ಇದು ಮಲಯಾಳಂ ಚಲನಚಿತ್ರ ರಂಗದ ಅತಿದೊಡ್ಡ ಬಿಡುಗಡೆಯಾಗಿದ ಚಲನಚಿತ್ರವಾಗಿತ್ತು ಹಾಗೂ ಬಹಳ ಯಶಸ್ಸು ಕಂಡಂತಹ ಚಲನಚಿತ್ರ. ಈ ಚಿತ್ರದಿಂದ ನಿವಿನ್ ಪಾಲಿಯವರಿಗೆ ಅತ್ಯುತ್ತಮ ನಟ ಹಾಗೂ ನಜ್ರಿಯಾ ನಾಜಿಮ್ ರವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಇನ್ನು ಪ್ರಮುಖ ಪ್ರಶಸ್ತಿಗಳು ಲಭಿಸಿತ್ತು.

Advertisement

ಈ ಚಿತ್ರವನ್ನು ಡಿಸೆಂಬರ್ 2013ರಲ್ಲಿ ಪ್ರಾರಂಭಿಸಿ, ಮಾರ್ಚ್ 2014ರಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿತ್ತು. ಕೇವಲ 70 ದಿನಗಳಲ್ಲಿ ಚಿತ್ರಿಕರಣ ಪೂರ್ಣಗೊಂಡಿತ್ತು. ಬೆಂಗಳೂರು, ಮೈಸೂರು ಹಾಗೂ ಕೊಚ್ಚಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದರು.

Advertisement

ಬೆಂಗಳೂರು ಡೇಸ್ ಚಿತ್ರಕ್ಕೆ ಇಂದು 10 ವರ್ಷಗಳ ಸಂರ್ಭಮ. ಚಿತ್ರ ಬಿಡುಗಡೆಗೊಂಡು ಇಂದಿಗೆ 10 ವರ್ಷ ಮುಗಿದಿದೆ. ಅಭಿಮಾನಿಗಳು ಚಿತ್ರವನ್ನು ಮತ್ತೆ ನೋಡಿ, ಚಿತ್ರತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಚಿತ್ರ ಬಿಡುಗಡೆಗೊಂಡು ದಶಕವೇ ಕಳೆದಿದ್ದರೂ, ಚಿತ್ರವು ಇಂದಿಗೂ ಬಹಳ ಮನರಂಜನೆ ನೀಡುತ್ತದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಚಿತ್ರವು ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರವನ್ನು ವೆಂಕಿ ಅಟ್ಲೂರಿ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಸಿತಾರಾ ಎಂಟರ್ ಟೈನ್ ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬಂಡವಾಳ ಹೂಡಿದೆ. ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, 27, ಸೆಪ್ಟೆಂಬರ್ 2024ರಂದು ಬಿಡುಗಡೆಯಾಗಲಿದೆ.

ಬೆಂಗಳೂರು ಡೇಸ್ ದಶಕದ ಸಂರ್ಭಮದ ಜೊತೆಗೆ, ಲಕ್ಕಿ ಭಾಸ್ಕರ್ ಚಿತ್ರದ ಬಿಡುಗಡೆಯ ಸುದ್ದಿಯೂ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಸಂತೋಷವನ್ನು ತಂದುಕೊಟ್ಟಿದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com