flixOye
Buzz

ಈ ವಾರದ ತುತ್ತಾ ಮತ್ತಾದಲ್ಲಿ “ಅರುಣ್ ಸಾಗರ್” ಕುಟುಂಬ

ರಂಗಕರ್ಮಿಯಾಗಿ ಸೇವೆ ಸಲ್ಲಿಸುತ್ತಾ ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಅರುಣ್ ಸಾಗರ್ ತನ್ನ ಕುಟುಂಬದೊಂದಿಗೆ ಕುಣಿದು ಕುಪ್ಪಳಿಸಿ ಎಲ್ಲರಿಗೆ ಮನರಂಜನೆ ನೀಡಲು ತುತ್ತಾ ಮುತ್ತಾದಲ್ಲಿ ಈ ವಾರ ಅತಿಥಿಯಾಗಿ ಆಗಮಿಸಿದ್ದಾರೆ.

ಆಟದಲ್ಲಿ ಭಾಗವಹಿಸುತ್ತಾ ಅರುಣ್ ಅವರ ತಾಯಿ ತನ್ನ ಮಗ ಮತ್ತು ಸೊಸೆಯ ಬಗ್ಗೆ ಹಾಡಿ ಹೊಗಳಿದರು. ಬಾಲ್ಯದಲ್ಲಿ ಕಷ್ಟಗಳನ್ನು ಅನುಭವಿಸಿದರೂ, ಎಲ್ಲವನ್ನು ಮೀರಿ ಒಬ್ಬ ದೊಡ್ಡ ಮನುಷ್ಯನಾಗಿದ್ದಾನೆ ಎಂದು ಹೆಮ್ಮೆ ಪಡುತ್ತಾ ಭಾವುಕರಾದರು.
ಅರುಣ್‍ರವರ ಪತ್ನಿಯಾದ ಮೀರಾ, ಒಂದು ಕಲಾ ಶಾಲೆಯನ್ನು ನಡೆಸುತ್ತಿದ್ದಾರೆ. ಆಟದ ಮಧ್ಯೆ ತಮ್ಮ ಹಾಗೂ ಅರುಣ್‍ರವರ ನಡುವೆ ಪ್ರೀತಿ ಮೂಡಿದ ಕ್ಷಣಗಳನ್ನು ಹಂಚಿಕೊಂಡರು. ಅಷ್ಟಲ್ಲದೇ ತಾನು ಅವರ ಪತ್ನಿಯಾಗಿ ಹೇಗೆ ಅರುಣರವರಿಗೆ ಸಹಕಾರ ನೀಡುತ್ತಾರೆ ಎಂದು ಹಂಚಿಕೊಂಡರು.

Advertisement

ತನ್ನ ಹಾಡುಗಾರಿಕೆ, ಕವನ ಮತ್ತು ನೃತ್ಯ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಇವರಿಗೆ ಸಾಥ್ ನೀಡಲು ಇತ್ತೀಚೆಗಷ್ಟೇ ಚಲನಚಿತ್ರಗಳಲ್ಲಿ ಹಾಡಲು ಆರಂಭಿಸಿರುವ ಪುತ್ರಿ ಅದಿತಿಯವರು ಕೂಡ ಸೇರಿಕೊಂಡರು. ತಂದೆಯ ಜೊತೆ ಜುಗಲಬಂದಿ ನಡೆಸಿ ಹಾಡಿಗೆ ಹಾಡು ನೃತ್ಯಕ್ಕೆ ನೃತ್ಯ ಎಂದು ಸರಿಸಾಟಿ ನಿಂತರು.


ಒಂದು ಫುಲ್ ಮನರಂಜನೆ ಕೊಡುವ ಅರುಣ್ ಸಾಗರ ಸಂಚಹಿಕೆ ಇದೇ ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

“ತುತ್ತಾ ಮುತ್ತಾ” ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಸಂಬಂಧಿತ · Related