ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ “99” ಚಿತ್ರದ 5ನೇ ಹಾಡು ಇಂದು ಬಿಡುಗಡೆಯಾಗಿದೆ

Published on

310 Views

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಸಖತ್ ಸುದ್ದಿ
ಮಾಡುತ್ತಿವೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿರುವ 4 ಹಾಡುಗಳು ಸಖತ್ ಹಿಟ್ ಆಗಿದ್ದು ಇಂದು ಮತ್ತೊಂದು ಹಾಡು
ಇಂದು ಬಿಡುಗಡೆಯಾಗಲಿದೆ. ಸೋನು ನಿಗಮ್ ಹಾಡಿರುವ ನೀ ಜ್ಞಾಪಕ ಹಾಡು ಇಂದು ಬಿಡುಗಡೆಯಾಗಲಿದೆ. ತಮಿಳಿನಲ್ಲಿ
ಸೂಪರ್ ಹಿಟ್ ಆಗಿದ್ದ 96 ಸಿನಿಮಾದ ರಿಮೇಕ್ ಆಗಿರುವ ಈ ಚಿತ್ರವನ್ನು ರಾಮು ಅವರು ನಿರ್ಮಾಣ ಮಾಡಿದ್ದಾರೆ.
ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಹಾಗೂ ದಿಲ್ ರಂಗೀಲಾ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪ್ರೀತಂ ಗುಬ್ಬಿ ಅವರು ಈ ಚಿತ್ರವನ್ನು
ನಿರ್ದೇಶನ ಮಾಡಿದ್ದಾರೆ. ಗಣೇಶ್ ಅವರಿಗೆ ಜೋಡಿಯಾಗಿ ಭಾವನ ಅವರು ನಟಿಸಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com