ಸಿಸಿಬಿ ವಿಚಾರಣೆಗೆ ಹಾಜರಾದ ಅನುಶ್ರೀ….

Published on

449 Views
Advertisement

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀರವರು ಇಂದು ಮಂಗಳೂರಿನಲ್ಲಿ ಸಿಸಿಬಿ ಹಾಗೂ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 4 ಗಂಟೆಯ ವಿಚಾರಣೆಯ ನಂತರ ಹೊರ ಬಂದ ಅನುಶ್ರೀಯವರು ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ ಎಂದಿದ್ದಾರೆ.

ಎಸಿಪಿ ವಿನಯ್ ಅವರ ನೇತ್ರತ್ವದಲ್ಲಿ ವಿಚಾರಣೆಯನ್ನು ನಡೆಸಲಾಯಿತು. ಡ್ರಗ್ಸ್ ವಿಚಾರವಾಗಿ ಈಗಾಗಲೇ ಬಂಧಿತರಾಗಿರುವ ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಅನುಶ್ರೀಯವರ ಹೆಸರನ್ನು ಬಾಯಿಬಿಟ್ಟ ಹಿನ್ನೆಲೆಯಲ್ಲಿ ಅನುಶ್ರೀಯವರನ್ನು‌ ವಿಚಾರಣೆಗೆ ಕರೆಸಲಾಗಿತ್ತು. ಈ ವಿಚಾರವಾಗಿ ಮಾಧ್ಯಮದವರ ಮುಂದೆ ಮಾತನಾಡಿದ ಅನುಶ್ರೀ ಸಿಸಿಬಿಯವರ ಎಲ್ಲ ಪ್ರಶ್ನೆಗಳಿಗೂ‌ ಉತ್ತರಿಸಿದ್ದೇನೆ.

Advertisement

ಮುಂದೆ ತನಿಖೆಗೆ ಕರೆದರೂ ಬರುತ್ತೇನೆ. ನಾನು ಯಾವುದೇ ಡ್ರಗ್ ಪಾರ್ಟಿಗಳಲ್ಲೂ ಪಾಲ್ಗೊಂಡಿಲ್ಲ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಅನ್ನೋ ಕೊಳೆಯನ್ನು ತೆಗೆಯಬೇಕು. ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗೌರವವಿದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ.

Advertisement

ಸುಮಾರು 12 ವರ್ಷಗಳ ‌ಹಿಂದೆ ತರುಣ್ ಅವರ ಪರಿಚಯವಿದ್ದು, ಕಾರ್ಯಕ್ರಮವೊಂದಕ್ಕೆ ಅವರು ನನಗೆ ಕೋರಿಯಾಗ್ರಾಫರ್ ಆಗಿದ್ದರು. ಆ ನಂತರದಲ್ಲಿ ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಅದರೆ ತರುಣ್ ಜೊತೆಗೆ ಯಾವುದೇ ಸಂಬಂಧವನ್ನು ನಾನು‌ ಹೊಂದಿರಲಿಲ್ಲ ಎಂದಿದ್ದಾರೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 3 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 3 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com