ಅನುರಾಧ ಭಟ್ “ಅಪ್ಪ ಐ ಲವ್ ಯೂ” ನಂತರ ಈಗ ಅಮ್ಮನಿಗೋಸ್ಕರ ಹಾಡು

Published on

508 Views
Advertisement

ಕನ್ನಡದ ಖ್ಯಾತ ಗಾಯಕಿ ಅನುರಾಧ ಭಟ್ ಕಂಠದÀ ಮೋಡಿಗೆ ಮರುಳಾಗದವರಿಲ್ಲ. ಇವರು ಅಪ್ಪನ ಬಗ್ಗೆ ಹಾಡಿರುವ “ಅಪ್ಪಾ ಐ ಲವ್ ಯೂ” ಹಾಡು ಸೂಪರ್ ಹಿಟ್ ಆಗಿತ್ತು. ಇದೀಗ ಅನುರಾಧ ಭಟ್ ಅಮ್ಮನ ಬಗ್ಗೆ ಹಾಡಿರುವ ಹೊಸ ಹಾಡು ಬಿಡುಗಡೆಯಾಗಿದೆ. ಹೌದು, ಇತ್ತೀಚೆಗೆ ಬಿಡುಗಡೆಯಾಗಿರ `ಅಸತೋಮ ಸದ್ಗಮಯ` ಚಿತ್ರದ ದ್ವನಿಸುರುಳಿಯಲ್ಲಿ ಅನುರಾಧ ಭಟ್ ಅವರು ಅಮ್ಮನಿಗೋಸ್ಕರ ಒಂದು ಹಾಡನ್ನ ಹಾಡಿದ್ದಾರೆ. “ನಾ ತೆರೆದೆ ತುಂಬಾ ಹಳೆಯ ಪುಟವ” ಎನ್ನುವ ಈ ಹಾಡಿನ ಸಂಗೀತದ ಜೊತೆಗೆ ಸಾಹಿತ್ಯ ಕೂಡ ಅದ್ಬುತವಾಗಿದ್ದು, ಅನುರಾದ ಭಟ್‍ರವರ ಕಂಚಿನ ಕಂಠ ಸಂಗೀತ ಪ್ರೇಮಿಗಳನ್ನ ಬಾವಪರವಶರನ್ನಾಗಿಸುತ್ತಿದೆ.

Advertisement

ಇದು, ಅಮ್ಮನ ಪ್ರೀತಿಗೋಸ್ಕರ ಹಪಹಪಿಸುತ್ತಿರುವರಿಗಾಗಿ ಅರ್ಪಿಸಲಾಗಿದೆ, ಜೊತೆಗೆ ಅಮ್ಮನ ಪ್ರೀತಿ ಎಷ್ಟು ದೊಡ್ಡದು ಎಂಬುದನ್ನ ಈ ಹಾಡಿನಲ್ಲಿ ವರ್ಣಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು. “ಅಸತೋಮ ಸದ್ಗಮಯ” ಚಿತ್ರಕ್ಕೆ ವಹಾಬ್ ಸಲೀಂರವರು ಸಂಗೀತವನ್ನ ನೀಡಿ ಸಾಹಿತ್ಯವನ್ನ ಕೂಡ ಬರೆದಿದ್ದಾರೆ. ನಿರ್ದೇಶಕರು ಈ ಹಾಡಿನ ಸಂದರ್ಭದ ಬಗ್ಗೆ ವಿವರಿಸಿ, ಅಮ್ಮನ ಬಗ್ಗೆ ಒಂದು ಇಮೋಶನಲ್ ಹಾಡು ಬೇಕೆಂದಾಗ ನನಗೂ ತುಂಬಾ ಸಂತೋಷವಾಯಿತು, ಏಕೆಂದರೆ ಇದಕ್ಕೆ ಹೊಂದುವಂತಹ ಒಂದು ಅದ್ಬುತವಾದ ಟ್ಯೂನ್ ನನ್ನ ಮನಸ್ಸಿನಲ್ಲಿತ್ತು ಮತ್ತದು ನನ್ನ ಫೇವರೀಟ್ ಟ್ಯೂನ್. ನಿರ್ದೇಶಕರಿಗೆ ಈ ಟ್ಯೂನ್ ಕೇಳಿಸಿದಾಗ ತುಂಬಾ ಇಷ್ಟ ಪಟ್ಟು ಒಂದೇ ಸಲಕ್ಕೆ ಓಕೆ ಮಾಡಿದರು ಎನ್ನುತ್ತಾರೆ ಸಂಗೀತ ನಿರ್ದೇಶಕರು. ಈ ಟ್ಯೂನ್‍ನಂತೆಯೇ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ, ಈ ಹಾಡಿನ ಬಗ್ಗೆ ಸಂಗೀತ ಪ್ರೇಮಿಗಳಿಂದ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಸಲೀಂ. ರಾಧಿಕಾ ಚೇತನ್‍ರವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಐಕೇರ್ ಮೂವೀಸ್ ಲಾಂಛನದಡಿಯಲ್ಲಿ ಅಶ್ವಿನ್ ಜೊಸ್ಸಿ ಪಿರೇರಾರವರು ನಿರ್ಮಿಸಿದ್ದು, ರಾಜೇಶ್ ವೇಣೂರ್ ನಿರ್ದೇಶಿಸಿದ್ದಾರೆ.

Advertisement

More Buzz

Buzz 8 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com