ಕಡಲ ಕಿನಾರೆಯಲ್ಲಿನ ಭಾವನಾತ್ಮಕ ಮತ್ತು ನಿಗೂಢ ಕಥಾಹಂದರವನ್ನು ಹೊಂದಿರುವ ಚಿತ್ರ ‘ಸಮುದ್ರಂ’. ಈ ಚಿತ್ರದಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಹೇಳ ಹೊರಟಿದ್ದು, ಚಿತ್ರವನ್ನು ರಾಘವ ಮಹರ್ಷಿ ನಿರ್ದೇಶನ ಮಾಡಿದ್ದಾರೆ. ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ ‘ಸಮುದ್ರಂ’ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ಚಿತ್ರದ ಟೈಟಲ್ ಅನ್ನು ಇತ್ತೀಚಿಗೆ ಲಾಂಚ್ ಮಾಡಿತ್ತು. ‘ಸಮುದ್ರಂ’ ಚಿತ್ರದ ಟೈಟಲ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿದ್ದರು.

ಈ ಚಿತ್ರದ ಮೂಲಕ ನಟಿ ಅನಿತಾ ಭಟ್ ಮೊದಲ ಬಾರಿಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅನಿತಾಭಟ್ ಕ್ರಿಯೇಷನ್ಸ್ ಡಾಟ್ ಟಾಕೀಸ್ ಸಹಯೋಗ ಇರಲಿದೆ. ಈ ಚಿತ್ರದಲ್ಲಿ ಅನಿತಾ ಭಟ್ ಗೃಹಿಣಿಯಾಗಿ ಸಮಾಜದೆದುರು ನಿಲ್ಲುವ ದಿಟ್ಟ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ. ಶಿವಧ್ವಜ್, ರಾಜಕಿಶೋರ್, ಸ್ವಾತಿ ಬಂಗೇರ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಆಕಾಶ ಪರ್ವ ಅವರ ಸಂಗೀತ ನಿರ್ದೇಶನ ವಿದ್ದು, ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೇ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ರಿಷಿಕೇಶ್ ನಿಭಾಯಿಸಿದ್ದಾರೆ. ಚಿತ್ರದ ಚಿತ್ರೀಕರಣವೂ ಉಡುಪಿ, ಮಲ್ಪೆ, ಸಕಲೇಶಪುರ, ಬ್ರಹ್ಮಾವಾರ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಸದ್ಯದಲ್ಲಿ ತೆರೆಗೂ ಬರಲಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.