ಮಗಳ ಬರ್ತ್​ಡೇಗೆ ಅಂಜಲಿ ಹಾಡನ್ನು ಮರು ಸೃಷ್ಟಿಸಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್

Published on

377 Views
Advertisement

ನಿಶ್ಚಿತಾರ್ಥ, ಮದುವೆ, ಹುಟ್ಟುಹಬ್ಬ ಹೀಗೆ ಯಾವ ಶುಭ ಸಮಾರಂಭ ಆದರೂ ಸಾಕಷ್ಟು ಹಣ ಖರ್ಚು ಮಾಡಿ ಸೆಲಬ್ರೇಟ್ ಮಾಡುತ್ತಾರೆ. ‘ಅಲಾ ವೈಕುಂಠಪುರಮುಲೋ’ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಪುಷ್ಪ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಮಗಳು ಅರ್ಹಾಳ 4ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆದರೆ ದೊಡ್ಡ ಹೋಟೆಲ್​​ನಲ್ಲಿ, ನೂರಾರು ಸೆಲಬ್ರಿಟಿಗಳನ್ನು ಕರೆದು ಹುಟ್ಟುಹಬ್ಬ ಆಚರಿಸಿಲ್ಲ. ಮನೆಯಲ್ಲೇ ಕುಟುಂಬ ಹಾಗೂ ಆತ್ಮೀಯರೊಂದಿಗೆ ಅಲ್ಲು ಅರ್ಜುನ್, ಮುದ್ದು ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ. ಬರ್ತ್​ಡೇ ಎಂದ ಮೇಲೆ ಮಗಳಿಗೆ ಏನಾದರೂ ಉಡುಗೊರೆ ಕೊಡಬೇಕಲ್ವಾ..? ಕೆಂಪು ಬಣ್ಣದ ಬಾಕ್ಸ್​​​ ಒಂದರಲ್ಲಿ ಮಗಳಿಗೆ ಉಡುಗೊರೆ ಕೊಡುತ್ತಿರುವ ಫೋಟೋವೊಂದನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಅರ್ಹಾ ಕೂಡಾ ಅಪ್ಪ ನೀಡಿದ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾಳೆ.

Advertisement

ಆದರೆ ವಿಚಾರ ಅದಲ್ಲ, ಈ ಗಿಫ್ಟ್​​​ಗಿಂತ ಮತ್ತೊಂದು ವಿಶೇಷ ಗಿಫ್ಟ್​​​​ವೊಂದನ್ನು ಅಲ್ಲು ಅರ್ಜುನ್ ಮಗಳಿಗೆ ನೀಡಿದ್ದಾರೆ. ಈ ಗಿಫ್ಟನ್ನು ಮಗಳಿಗೆ ನೀಡಿದ್ದಾರೆ ಎನ್ನುವುದಕ್ಕಿಂತ ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ ಎನ್ನಬಹುದು. ಮಣಿರತ್ನಂ ನಿರ್ದೇಶನದಲ್ಲಿ 1990 ರಲ್ಲಿ ಬಿಡುಗಡೆಯಾದ ಬೇಬಿ ಶಾಮಿಲಿ ಅಭಿನಯದ ‘ಅಂಜಲಿ’ ಚಿತ್ರದ ಹಾಡೊಂದನ್ನು ರೀ ಕ್ರಿಯೇಟ್ ಮಾಡಲಾಗಿದೆ. ”ಅಂಜಲಿ ಅಂಜಲಿ ಅಂಜಲಿ ಚಿಲಿಕೆ ನವ್ವುಲ ಪೂವುಲ ಜಾಬಿಲಿ…” ಹಾಡನ್ನು ಮರುಸೃಷ್ಟಿಸಲಾಗಿದೆ. ವಿಶೇಷ ಎಂದರೆ ಈ ಹಾಡಿನಲ್ಲಿ ಅಲ್ಲು ಅರ್ಜುನ್ ಮಗಳು ಅರ್ಹಾ, ಮಗ ಅಯಾನ್ ಹಾಗೂ ಇತರ ಮಕ್ಕಳು ನಟಿಸಿದ್ದಾರೆ. ಕೊನೆಯಲ್ಲಿ ಅಲ್ಲು ಅರವಿಂದ್ ಹಾಗೂ ಅಲ್ಲು ಅರ್ಜುನ್ ಕೂಡಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com