ಅಕ್ಷಿತ್‌ಶಶಿಕುಮಾರ್ ಮೊದಲ ಚಿತ್ರ ’ಸೀತಾಯಣ’ ಇಂದಿನಿಂದ ರಾಜ್ಯದಾದ್ಯಂತ ತೆರೆಗೆ

Published on

690 Views
Advertisement

ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಅಭಿನಯಿಸಿರುವ ಚಿತ್ರ ’ಸೀತಾಯಣ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದೆ. ಸಿನಿಮಾದ ಕುರಿತಂತೆ ವಿವರ ನೀಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ರಾಜವರ್ಧನ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ನನ್ನ ತಂದೆ ಹಾಗೂ ಶಶಿಕುಮಾರ್ ತುಂಬ ಆಪ್ತರು. ಚಿತ್ರದಲ್ಲಿ ಒಳ್ಳೆ ಅಂಶಗಳು ಇರಲಿದೆ. ಲವರ್ ಬಾಯ್ ಆಗಿದ್ದರೂ ಆಕ್ಷನ್ ಸೀನ್‌ದಲ್ಲಿ ಮಿಂಚಿದ್ದಾರಾ. ಎಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರ ಮಕ್ಕಳು ಮೇಲಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ನಟಿಸಿರುವ ಪ್ರಥಮ ಚಿತ್ರಕ್ಕೆ ಅಪ್ಪು ಸರ್ ಹಾಡಿರೋದು ನನ್ನ ಪುಣ್ಯ ಎನ್ನಬಹುದು. ಅಪ್ಪ ಒಳ್ಳೆ ಡ್ಯಾನ್ಸರ್ ಆಗಿದ್ದರು. ಆದರೆ ಇದರಲ್ಲಿ ನಾನು ಡ್ಯಾನ್ಸ್ ಮಾಡಿಲ್ಲ. ಮುಂದಿನ ಚಿತ್ರದಲ್ಲಿ ಖಂಡಿತ ಮಾಡುವೆ. ಶಿವರಾಜ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರೆ, ಉಪೇಂದ್ರ ಅವರು ಹಾಡನ್ನು ಅನಾವರಣಗೊಳಿಸಿದರು. ರಶ್ಮಿಕಾಮಂದಣ್ಣ ಮತ್ತೋಂದು ಗೀತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. 2019ರಲ್ಲಿ ಶುರುವಾಗಿ 2020ರಲ್ಲಿ ಮುಗಿಯಿತು. ಕರೋನ ಕಾರಣದಿಂದ ತಡವಾಗಿದೆ. ಪ್ರೀತಿಯ ಕಥೆ ಆದರೂ ವಿರಾಮದ ನಂತರ ಥ್ರಿಲ್ಲರ್ ಅಂಶಗಳು ಬರಲಿದ್ದು, ಸಾಕಷ್ಟು ತಿರುವುಗಳಿಂದ ಕೂಡಿದೆ. ಮದ್ಯಮ ವರ್ಗದ ಹುಡುಗನಾಗಿ ಸಮಸ್ಯೆಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾನೆ ಎನ್ನುವ ಪಾತ್ರವಾಗಿದೆ. ಮಾತೃಭಾಷೆ ಕನ್ನಡವಾಗಿರುವುದರಿಂದ ಮೊದಲು ಇಲ್ಲಿ ರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ತೆಲುಗುದಲ್ಲಿ ಬರಲಿದೆ ಎಂಬುದಾಗಿ ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.

ರಾಮಾಯಣದಲ್ಲೂ ನಾಯಕ, ನಾಯಕಿ ಖಳನಾಯಕ ಇದ್ದಂತೆ ಇದರಲ್ಲೂ ಅದೆಲ್ಲವೂ ಇದೆ. ಅದಕ್ಕಾಗಿ ಸೀತಾಯಣ ಹೆಸರನ್ನು ಇಡಲಾಗಿದೆ. ಮಂಗಳೂರು, ಆಗುಂಬೆ, ವೈಜಾಕ್, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಲಲಿತಾರಾಜಲಕ್ಷೀ ಬಂಡವಾಳ ಹೂಡಿದ್ದಾರೆ ಅಂತ ರಚಿಸಿ ನಿರ್ದೇಶನ ಮಾಡಿರುವ ಪ್ರಭಾಕರ್‌ಆರಿಪ್ಕಾ ಮಾಹಿತಿ ನೀಡಿದರು.

Advertisement

ಕವಿರಾಜ್ ಮತ್ತ ಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ ಭಾರದ್ವಾಜ್ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ದುರ್ಗಪ್ರಸಾದ್‌ಕೊಲ್ಲಿ, ಸಂಕಲನ ಪ್ರವೀಣ್‌ಪುಡಿ ಅವರದಾಗಿದೆ. ಇದಕ್ಕೂ ಮುನ್ನ ಟ್ರೇಲರ್ ಮತ್ತು ಪುನೀತ್‌ರಾಜ್‌ಕುಮಾರ್ ಹಾಡಿರುವ ’ಯಾರು ನೀನು ಯಾರು, ಹರಿವ ನದಿಗೆ ಎದುರು ನಾನು ಈಜಿರುವೆ’ ವಿಡಿಯೋ ಗೀತೆಯನ್ನು ತೋರಿಸಲಾಯಿತು.
ಇಂದಿನಿಂದ ಚಿತ್ರ ಪ್ರೇಕ್ಷಕರ ಮಡಿಲಿಗೆ ಬರಲಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಯಶಸ್ವಿಗೊಳಿಸಬೇಕಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com