ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲಬಾರಿ ನಾಯಕನಾಗಿ ನಟಿಸಿರುವ ’ಸೀತಾಯಣ’ ಚಿತ್ರ

Published on

308 Views
Advertisement

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲಬಾರಿ ನಾಯಕನಾಗಿ ನಟಿಸಿರುವ ’ಸೀತಾಯಣ’ ಚಿತ್ರದ ಒಂದು ಹಾಡನ್ನು ರಿಯಲ್‌ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಮದುವೆ ಶುಭಸಂದರ್ಭದಲ್ಲಿ ರಾಮಾಯಣದಲ್ಲಿ ಬರುವ ಶ್ಲೋಕವನ್ನು ಬಳಸುತ್ತಿದ್ದುದನ್ನು ಬದಲು ಮಾಡಿ ಅದಕ್ಕೆ ಸುಂದರ ಹಾಡನ್ನು ಸಿದ್ದಪಡಿಸಲಾಗಿದೆ. ’ಶ್ರೀರಾಮ ಪತ್ನಿ, ಜನಕಸ್ಯ ಪುತ್ರಿ, ಸೀತಾಂಗನ ಸುಂದರ ಕೋಮಲಾಂಗಿ’ ಹೀಗೆ ಸಾಗುವ ಸಾಲುಗಳಿಗೆ ಗಾಯಕಿ ನಯನನಾಯರ್ ಧ್ವನಿಯಾಗಿದ್ದಾರೆ. ಹೊಸ ರೀತಿಯ ಪ್ರೇಮಕತೆ, ಕುತೂಹಲ ಜೊತೆಗೆ ಭಾವನೆಗಳು ತುಂಬಿದ ಕತೆ ಇರಲಿದೆ. ಪ್ರಭಾಕರ್‌ಆರಿಪ್ಕಾ ರಚನೆ, ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದಾರೆ. ಲಲಿತಾರಾಜಲಕ್ಷೀ ನಿರ್ಮಾಪಕಿಯಾಗಿ ಕಲರ‍್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ಮೂಲಕ ನಿರ್ಮಾಣ ಮಾಡಿದ್ದಾರೆ.

ಮುಂಬೈ ನೀರೆ ಅನಹಿತಭೂಷಣ್ ನಾಯಕಿ. ತಾರಗಣದಲ್ಲಿ ವಿಕ್ರಂಶರ್ಮ, ಶರ್ಮಿತಾಗೌಡ, ಮಧುಸೂದನ್, ಮೇಘನಾಗೌಡ, ಅಜಯ್‌ಘೋಷ್, ಹಿತೇಶ್. ವಿಧೆಯುಲೇಖರಮನ್, ಬಿತ್ರಿಸತ್ತಿ, ಟಿಎನ್‌ಆರ್, ಕೃಷ್ಣಭಗವಾನ್, ಬೇಬಿ ಟ್ರೈಕ್ಷಾ, ಅನಂತಬಾಬು, ಗುಂಡುಸುದರ್ಶನ್, ಮಧುಮಣಿ, ಜಬರ್‌ದಸ್ತ್ ಅಪ್ಪರಾವ್, ಲೋಬೋ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕವಿರಾಜ್,ಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ್‌ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್, ಹೈದರಾಬಾದ್, ಬ್ಯಾಂಕಾಕ್ ಕಡೆಗಳಲ್ಲಿ ೬೩ ದಿವಸ ಚಿತ್ರೀಕರಣ ನಡೆದಿದೆ. ಛಾಯಾಗ್ರಹಣ ದುರ್ಗಾಪ್ರಸಾದ್‌ಕೊಳ್ಳಿ, ಸಂಕಲನ ಪ್ರವೀಣ್‌ಪುಡಿ, ಸಾಹಸ ರಿಯಲ್‌ಸತೀಶ್, ನೃತ್ಯ ಅನೀಶ್ ಅವರದಾಗಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವುದು ವಿಶೇಷ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com