flixOye
Buzz

ಶ್ರೀಕೃಷ್ಣ ಪರಮಾತ್ಮನಿಗೆ ನಾಯಕಿಯಾದ ಅದಿತಿ…

ಬಿಎನ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ದಲ್ಲಿ ಧ್ರುವನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ.


ಈ ಚಿತ್ರವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸರಳವಾಗಿ ಲಾಂಚ್ ಮಾಡಲಾಗಿತ್ತು. ವಿಜಯದಶಮಿಯಂದು ಮೂಹೂರ್ತ ನಡೆದಿದ್ದು ಅದಿತಿ ಪ್ರಭುದೇವ ನಟನೆಯ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಕ್ಲಾಪ್ ಮಾಡಿದ್ದು, ಮೊದಲ ಶಾಟ್ ತೆಗೆಯಲಾಯಿತು, ಧ್ರುವನ್ ಮೊದಲ ಚಿತ್ರ ಪ್ರೇಮ ಕಥೆಯಿಂದ ಕೂಡಿದ್ದು, ನವೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

ಭಾರತಿ ಸಿನಿ ಕಂಬೈನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಭರತ್ ವಿಷ್ಣುಕಾಂತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದ್ದು, ಆದ್ವಿಕ್ ಆರ್ಯ ಛಾಯಾಗ್ರಹಣವಿದೆ.

ಸಂಬಂಧಿತ · Related