flixOye
Buzz

‘ಪೆಲ್ಲಿ ಸಂದಡಿ’ ತೆಲುಗು ಚಿತ್ರದಲ್ಲಿ ನಟಿ ಶ್ರೀಲೀಲಾ

ತೆಲುಗು‌ ನಟ ಶ್ರೀಕಾಂತ್ ರವರು ತಮ್ಮ ಪುತ್ರ ರೋಶನ್ ಮೇಕಾ‌ರನ್ನು‌ ತೆರೆಗೆ ತರಲು‌ ಸಿದ್ಧರಾಗಿದ್ದು, 25 ವರ್ಷಗಳ ಹಿಂದೆ ಕೆ.ರಾಘವೇಂದ್ರ ‌ರಾವ್ ನಿರ್ದೇಶನದಲ್ಲಿ ‌’ಪೆಲ್ಲಿ ಸಂದಡಿ’ ಎಂಬ ಸಿನಿಮಾದಲ್ಲಿ ಶ್ರೀಕಾಂತ್ ನಟಿಸಿದ್ದರು. ಈಗ‌ ಅದೇ ಟೈಟಲ್‌ ನಲ್ಲಿ ಅದರ ಮುಂದುವರಿದ ಭಾಗವಾಗಿ ಈ ಚಿತ್ರ ಬರಲಿದೆ.

ಕನ್ನಡದ‌ ನಟಿ‌ ಶ್ರೀಲೀಲಾ ಇತ್ತೀಚೆಗೆ ‘ಪೆಲ್ಲಿ ಸಂದಾಡಿ’ ಚಿತ್ರ ತಂಡವನ್ನು‌ ಭೇಟಿಯಾಗಲು‌ ಹೈದರಾಬಾದ್ ಗೆ ಹೋಗಿದ್ದರು. “ನಾನು‌ ಈ‌ ತಿಂಗಳ‌ ಕೊನೆಯಲ್ಲಿ ತೆಲುಗು‌ ಚಿತ್ರತಂಡ ಸೇರಲಿದ್ದೇನೆ. ಈಗ ‘ಬೈಟ್ 2 ಲವ್’ ಸಿನಿಮಾದಲ್ಲಿ ಬಿಜಿಯಾಗಿದ್ದೇನೆ. ‘ಪೆಲ್ಲಿ ಸಂದಡಿ’ ಸಿನಿಮಾ ಮುಗಿಸಿ, ನಂತರ ಧ್ರುವ ಸರ್ಜಾರವರ ‘ದುಬಾರಿ’ ಚಿತ್ರದಲ್ಲಿ ನಟಸಲಿದ್ದೇನೆ” ಎಂದಿದ್ದಾರೆ ಶ್ರೀಲೀಲಾ. ‘ಪೆಲ್ಲಿ ಸಂದಡಿ’ ಚಿತ್ರವನ್ನು ಗೌರಿ ಅವರು ನಿರ್ದೇಶಿಸುತ್ತಿದ್ದು, ರಾಘವೇಂದ್ರ ರಾವ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಸಂಬಂಧಿತ · Related