flixOye
Buzz

Sanjjanaa Galrani: ಕೊನೆಗೂ ನಟಿ ಸಂಜನಾಗೆ ಸಿಕ್ತು ಜಾಮೀನು…!!

ಸೆಪ್ಟೆಂಬರ್‌ 8 ರಂದು ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ರ ಬಲೆಗೆ ಬಿದ್ದ ನಟಿ ಸಂಜನಾ, ಅದರ ವಿಚಾರಣೆ ಪ್ರಾರಂಭವಾಗಿನಿಂದಲೂ ಜಾಮೀನಿಗೆ ಅರ್ಜಿ ಸಲ್ಲಿಸುತ್ತಲೇ ಇದ್ದರು. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ನಟಿ ಸಂಜನಾಗೆ ಕೊನೆಗೂ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.

ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠವು ಸಂಜನಾರ ವೈದಕೀಯ ಪರೀಕ್ಷೆ ನಡೆಸಿ ವರದಿ ನೀಡಿದೆ. ಈ ವರದಿಯನ್ನು ಆಧರಿಸಿ ಷರತ್ತು ಬದ್ಧ ಜಾಮೀನು ನೀಡಲಾಗಿದ್ದು, ಸ್ಯಾಂಡಲ್ ವುಡ್ ನಟಿ ಸಂಜನಾ ಬಿಡುಗಡೆಯಾಗುವ ಸಾಧ್ಯತೆಯಿದೆ. ಅದರೆ ನಟಿ ರಾಗಿಣಿಗೆ ಜಾಮೀನು ಸಿಗದೆ, ವಿಚಾರಣೆ ಜನವರಿಗೆ ಮುಂದೂಡಲು ಪಟ್ಟಿರುವುದರಿಂದ ರಾಗಿಣಿ ಜೈಲಿನಲ್ಲೇ ಹೊಸ ವರ್ಷ ಕಳೆಯಬೇಕಿದೆ.

ಸಂಬಂಧಿತ · Related