Aa 90 Dinagalu : ಆ ರೋಚಕ ದಿನ ಆ 90 ದಿನಗಳು

Published on

1632 Views
Advertisement

Aa 90 Dinagalu : ಆ ರೋಚಕ ದಿನ ಆ 90 ದಿನಗಳು

‘ರಿಸರ್ವೇಶನ್’ ಸಿನಿಮಾದ ಮೂಲಕ ‘ರಜತ ಕಮಲ’ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿಗೆ ತಂದು ಕೊಟ್ಟು ‘ಗುಲ್ವಾಡಿ’ ಎಂಬ ಪುಟ್ಟ ಊರನ್ನು ವಿಶ್ವದೆಲ್ಲೆಡೆ ಗಮನ ಸೆಳೆಯುವಂತೆ ಮಾಡಿದ ಪ್ರತಿಭಾವಂತ ನಿರ್ದೇಶಕ, ನಿರ್ಮಾಪಕ, ನಟ ಯಾಕುಬ್ ಖಾದರ್ ಗುಲ್ವಾಡಿ.
‘ಆ 90 ದಿನಗಳು’ ವಿಭಿನ್ನ ಶೈಲಿಯ ಸಸ್ಪೆನ್ಸ್ ಚಿತ್ರ ಆ 90 ದಿನಗಳಲ್ಲಿ ಬರುವ ರೋಚಕ ಸನ್ನಿವೇಶ ಎಲ್ಲರ ಮೈ ಜುಂ ಎನಿಸುವಂತೆ ಮಾಡುತ್ತದೆ. ಈ ಚಿತ್ರವನ್ನು ರೋನಾಲ್ಡ್ ಲೋಬೋ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜಂಟಿಯಾಗಿ ನಿರ್ದೇಶಿಸಿದ್ದಾರೆ.
Super Machi Trailer : ಸೂಪರಾಗಿ ನಿಮ್ಮನ್ನು ರಂಜಿಸಲಿದೆ, ‘ಸೂಪರ್ ಮಚ್ಚಿ’

Advertisement

ಈಗಾಗಲೇ ‌ಕೆಲವು ಚಿತ್ರಗಳಲ್ಲಿ ನಟಿಸಿರುವ ರಥೀಕ್ ಮುರುಡೇಶ್ವರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ರಾಧಾ ಭಗವತಿ ಹಾಗೂ ಕೃತಿಕಾ ಅಭಿನಯಿಸಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಅಭಿನಯಿಸಿದ್ದು ಚಿತ್ರದಲ್ಲಿ ತಾಯಿ ಮಗನ ಬಾಂಧವ್ಯ ಮನಮುಟ್ಟುವಂತಿದೆ.

Advertisement

ಗುಜರಿ ಉದ್ಯಮದೊಂದಿಗೆ ಬಣ್ಣದ ಲೋಕದ ಗೀಳನ್ನು ಬೆಳೆಸಿಕೊಂಡ ಯಾಕೂಬ್ ಖಾದರ್ ಗುಲ್ವಾಡಿ ಗೆ ಸಿನಿಮಾ ಅಂದರೆ ಪಂಚಪ್ರಾಣ. ಸಿನಿಮಾದ ಮೂಲಕ ಸಮಾಜದ ಅಂಕುಡೊಂಕು ಅನ್ನು ತಿದ್ದುವ ಜವಾಬ್ದಾರಿಯನ್ನು ತಮ್ಮ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಇವರ ‘ತಲಾಖ್ ತಲಾಖ್’ ಸಿನಿಮಾ. ಒಂದಲ್ಲಾ ಒಂದು ದಿನ ಗೆಲ್ಲಲೇಬೇಕು ಎಂಬ ಭರವಸೆಯೊಂದಿಗೆ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಪ್ರತಿಭೆಯ ಮೂಲಕ ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಯಾಕೂಬ್ ಖಾದರ್ ಗುಲ್ವಾಡಿ.

‘ಆ 90 ದಿನಗಳು’ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ರಾಧಾಕೃಷ್ಣ ಬಸ್ರೂರ್ ಸಂಗೀತ ನೀಡಿದ್ದಾರೆ. ಗಾಯಕ ಅರ್ಫಾಝ್ ಉಳ್ಳಾಲ್ ಮತ್ತು ಶಶಿಕಲ ಸುನೀಲ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಥೆ- ಚಿತ್ರಕಥೆ ಮತ್ತು ನಿರ್ಮಾಣದ ಜವಾಬ್ದಾರಿ ರೋನಾಲ್ಡ್ ಲೋಬೋ ಅವರದು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com