ಅದ್ದೂರಿ ವೆಚ್ಚದ ಹೊಸಬರ ಸಿನಿಮಾ ‘ಅಶ್ವ’

Published on

324 Views
Advertisement

ಚಂದನವನದಲ್ಲಿ ಒಂದು ವಾರದಿಂದ ಚಿತ್ರಗಳ ಮಹೂರ್ತ ಸಮಾರಂಭಗಳು ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ ಹೊಸಬರ ’ಅಶ್ವ’ ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‌ವುಡ್‌ದಲ್ಲಿ ಮೊದಲು ಎನ್ನುವಂತೆ ’ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ೨೫ ನಿಮಿಷದ ’ಪ್ರೀಮಿಯರ್ ಷೋ ರೀಲ್ಸ್’ ಕಾರ್ಯಕ್ರಮ ಜರುಗಿತು. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ಕತೆಯಲ್ಲಿ ಶೇಕಡ ಎರಡರಷ್ಟು ಮಾತ್ರ ಬರಲಿದ್ದು, ಚಿತ್ರವು ಬೇರೆ ರೀತಿಯಲ್ಲಿ ಇರುತ್ತದಂತೆ.

ಒಂದು ದಶಕದ ಕಾಲ ಸಾಕಷ್ಟು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿದ್ದ ಎ.ಆರ್.ಸಾಯಿರಾಮ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಇವರನ್ನು ನಂಬಿಕೊಂಡು ಕೋಲಾರ ಕೇಶವ-ಹೇಮಲತಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಕೆ.ಕೆ.ಎಂಟರ್‌ಟೈನ್‌ಮೆಂಟ್ಸ್ ಮತ್ತು ಸೂಪರ್‌ನೋವ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಸಿದ್ದಗೊಳ್ಳುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅರ್ಪಿಸುತ್ತಿರುವುದು ಮತ್ತೋಂದು ಹಿರಿಮೆಯಾಗಿದೆ.

Advertisement

ಸ್ಪುರದ್ರೂಪಿ ಯುವ ನಟ ವಿವಿನ್.ಕೆ.ಕೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ನಾಯಕಿಗಾಗಿ ಶೋಧ ನಡೆಯತ್ತಿದೆ. ತಾರಾಗಣದಲ್ಲಿ ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‌ರೈ, ಸಾಧುಕೋಕಿಲ, ರಂಗಾಯಣರಘು, ಭವಾನಿಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರಅರಸ್, ಬಲರಾಜವಾಡಿ, ಯಶ್‌ಶೆಟ್ಟಿ, ಪವನ್‌ಪಚ್ಚಿ, ರಿಚ್ಚಿ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜಭಟ್, ಜಯಂತ್‌ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್, ಭರ್ಜರಿಚೇತನ್ ಸಾಹಿತ್ಯದ ಹಾಡುಗಳಿಗೆ ಬಿ.ಅಜನೀಶ್‌ಲೋಕನಾಥ್ ಸಂಗೀತವಿದೆ. ರವಿಕುಮಾರ್‌ಸನ ಛಾಯಾಗ್ರಹಣ, ಶ್ರೀಕಾಂತ್‌ಗೌಡ ಸಂಕಲನ, ರವಿವರ್ಮ-ಪೀಟರ್‌ಹನ್ಸ್-ವಿಕ್ರಂ-ಕುಂಗುಫುಚಂದ್ರು ಸಾಹಸ, ಜಾನಿ-ಶೇಖರ್-ಧನಂಜಯ್ ನೃತ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ನವೆಂಬರ್s ಕೊನೆವಾರದಿಂದ ಚಿತ್ರೀಕರಣ ನಡೆಸಲು ತಂಡವು ತಯಾರಿ ಮಾಡಿಕೊಳ್ಳುತ್ತಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com