flixOye
Buzz

ಸಾಂಗ್ ರೆಕಾರ್ಡಿಂಗ್ ಮೂಲಕ ವಿಕ್ರಮ್ ರವಿಚಂದ್ರನ್ ಚಿತ್ರಕ್ಕೆ ಚಾಲನೆ

ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್
ರವಿಚಂದ್ರನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಚಿತ್ರ
ಅಂತೂ ಇಂತೂ ಶುರುವಾಗಿದೆ. ಈ ಹಿಂದೆ ವಿಕ್ರಮ್ ಅವರು ನಾಗಶೇಖರ್ ನಿರ್ದೇಶನದಲ್ಲ ನವೆಂಬರ್ ನಲ್ಲಿ ನಾನು ಮತ್ತು ಅವಳು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ ಎಂದು ಹೇಳಲಾಗಿತ್ತಾದರೂ ಕಾರಣಾಂತರಗಳಿಂದ
ಆ ಚಿತ್ರ ಸೆಟ್ಟೇರಲಿಲ್ಲ. ಈಗ ರೋಸ್ ಮಾಸ್ ಲೀಡರ್ ಖ್ಯಾತಿಯ ಸಹನಾ ಮೂರ್ತಿ
(ನರಸಿಂಹ) ಅವರು ನಿರ್ದೇಶನ ಮಾಡಲಿರುವ ಮುಂದಿನ ಚಿತ್ರದ ಮೂಲಕ
ವಿಕ್ರಮ್ ರವಿ ಅವರು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಕುರಿತು ಮಾತುಕಥೆ ಅಂತಿಮವಾಗಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ
ಚಾಲನೆ ನೀಡಲಾಗಿದೆ‌. ಚಿತ್ರದ ಚಿತ್ರೀಕರಣ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ‌. ಚಿತ್ರದ ಟೈಟಲ್ ಹಾಗೂ ಇನ್ನೀತರ ವಿಷಯಗಳನ್ನು ಪತ್ರಿಕಾ ಗೋಷ್ಠಿ ಮೂಲಕ ಸದ್ಯದಲ್ಲೇ ತಿಳಿಸಿಕೊಡಲಿದ್ದಾರೆ ನಿರ್ದೇಶಕ ಸಹನಾ ಮೂರ್ತಿ ಅವರು.

ಸಂಬಂಧಿತ · Related