ಸೂರ್ಯೋದಯ ಮೂವೀಸ್ ಬ್ಯಾನರ್ ನವರ ನಿರ್ಮಾಣದಲ್ಲಿ
ಎನ್.ಕೃಷ್ಣ ಮೋಹನ್ ಶೆಟ್ಟಿ ಅವರು ಕಥೆ ಸಂಭಾಷಣೆ ಬರೆದು ನಿರ್ದೇಶನ
ಮಾಡಿರುವ “ನೇಗಿಲ ಒಡೆಯ” ಚಿತ್ರವು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ
ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಭಾನು ಪ್ರಕಾಶ್ ಎಂಬ ಉದಯೋನ್ಮುಖ ನಟ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಇವರಿಗೆ ಜೋಡಿಯಾಗಿ ಪ್ರಿಯಾಪಾಂಡೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕ್ಟರಿ ಡ್ಯಾನಿಯಲ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನುಳಿದಂತೆ ಎಸ್.ಬಾಲು ಅವರ ಛಾಯಾಗ್ರಹಣ, ಸಿ.ಎನ್.ಮೂರ್ತಿ ಅವರ ಚಿತ್ರಕಥೆ ಹಾಗೂ ಸಹನಿರ್ದೇಶನ, ಮಂಜು ಅವರ ಸಂಕಲನ ಈ ಚಿತ್ರಕ್ಕಿದೆ.ಸಂಕ್ರಾಂತಿ ಹಬ್ಬದಂದು ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಅವೇಶ್ ಆಡಿಯೋದವರು ಹೊರತರುತ್ತಿದ್ದಾರೆ.









