flixOye
Buzz

“ಕಾಮಿಡಿ ಕಿಲಾಡಿಗಳು” ಜೋಡಿ” ದಂಪತಿಗಳಾಗಲಿದ್ದಾರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡು ಅಪಾರ ಜನಮನ್ನಣೆ ಪಡೆದ
ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಗೆದ್ದ
ಜಿ.ಗೋವಿಂದೇಗೌಡ ಹಾಗೂ ದಿವ್ಯಶ್ರೀ ಈ ಕಾರ್ಯಕ್ರಮದಲ್ಲಿ ಹಲವು
ಬಾರಿ ಪ್ರೇಮಿಗಳಾಗಿ ಗಂಡ ಹೆಂಡತಿಯಾಗಿ ನಟಿಸಿ ಪ್ರೇಕ್ಷಕರಿಗೆ ನಗುವಿನ
ಕಚಗುಳಿ ನೀಡುತ್ತಿದ್ದರು. ಈಗ ಇವರಿಬ್ಬರು ನಿಜ ಜೀವನದಲ್ಲಿ ಗಂಡ
ಹೆಂಡತಿಯಾಗಿ ಹಸೆಮಣೆ ಏರಲಿದ್ದಾರೆ. ಆ ಕಾರ್ಯಕ್ರಮ ನಡೆಯುವ
ಸಂಧರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮವು ಹುಟ್ಟಿ ಅದು ಬೆಳೆದು ಈಗ
ಮದುವೆಯತ್ತ ಸಾಗಿದೆ. ಇದೇ ತಿಂಗಳ 27ಕ್ಕೆ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದ್ದು ಮಾರ್ಚ್ ತಿಂಗಳಲ್ಲಿ ಪ್ರಸಿದ್ದ ಪುಣ್ಯಕ್ಷೇತ್ರ ವಾದ ಶೃಂಗೇರಿ ಯಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಕಾಮಿಡಿ ಕಿಲಾಡಿಗಳು ಮೂಲಕ ರಂಜಿಸಿದ್ದ ಇವರು ದಂಪತಿಗಳಾಗಿ ಸುಖವಾಗಿ ಬಾಳಲೆಂದು ಶುಭಹಾರೈಸೋಣ.

ಸಂಬಂಧಿತ · Related