flixOye
Buzz

ಮಿಸ್ ಯೂ ಅಣ್ಣಾ, ಎಂದ ಯಶ್..!!!


ಇಂದು ಎಲ್ಲ ಕಡೆ ‘ಕೆಜಿಎಫ್’ ಹವಾ. ಇನ್ನೊಂದು‌ ಕಡೆ ಅಂಬಿಯ ತಿಂಗಳ ತಿಥಿ ಕಾರ್ಯ. ಅಂಬಿಯ ಮಗನಂತೆ ಇದ್ದ ಯಶ್ ಅಂಬಿಯನ್ನು ಈ‌ ಸಮಯದಲ್ಲಿ ನೆನೆಸಿಕೊಂಡರು. ಅಂಬಿರೀಶ್ ರವರು ಇಹಲೋಕ ತ್ಯಜಿಸಿದ ಸಮಯದಲ್ಲೂ ಅವರ ಎಲ್ಲ ಕಾರ್ಯದಲ್ಲಿ ಭಾಗಿಯಾಗಿದ್ದರು ಯಶ್. ಇಂದು ‘ಕೆಜಿಎಫ್’ ಗೆಲುವಿನ ಖುಷಿಯಲ್ಲಿರುವ ಸಮಯದಲ್ಲೂ ಯಶ್ ಅಂಬಿಯನ್ನು ನೆನೆದು ‘ಅಣ್ಣಾ ಸಿನಿಮಾವನ್ನು ನೋಡ ಬೇಕಿತ್ತು’ ಎಂದು ಹೇಳಿದ್ದರು. ಅಂಬಿಯ ಮನೆಗೆ ತೆರಳಿದ ಯಶ್ ಅಂಬಿ ಪೋಟೋ ಗೆ ಪುಷ್ಪ ಅರ್ಚನೆ ಮಾಡಿ ಭಾವುಕರಾದರು. ಈ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ ಮಿಸ್ ಯೂ ಅಣ್ಣಾ’ ಎಂದು ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ಅಂಬಿರೀಶ್ ರವರು ಬದುಕಿದ್ರೆ ಇಬ್ಬರು ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತಿದ್ರೇನು…, ಅದ್ರೆ ಅವರು ನಮ್ಮೊಂದಿಗೆ‌ ಇಲ್ಲವೆಂಬುದೇ ನೋವಿನ ಸಂಗಾತಿ.

ಸಂಬಂಧಿತ · Related