ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದೊಡ್ಡ ಶಾಕ್ ಒಂದು ಎದುರಾಗಿದೆ. ಬೆಂಗಳೂರಿನ 10ನೇ ಸಿಟಿ ಸಿವಿಎಲ್ ಕೋರ್ಟ್ ನಿಂದ ‘ಕೆಜಿಎಫ್’ ಚಿತ್ರದ ಬಿಡುಗಡೆಗೆ ಡಿಸೆಂಬರ್ 19ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ವೆಂಕಟೇಶ್ ಎಂಬುವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ರೌಡಿ ತಂಗಂ ಹಕ್ಕು ಪಡೆದಿದ್ದ ವೆಂಕಟೇಶ್ ‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಚಿತ್ರ ಎಂದು ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದಿಂದ ಕೋಲಾರ ಗೋಲ್ಡ್ ಫೀಲ್ಡ್ ಹೆಸರು ದುರ್ಬಳಕೆಯಾಗಿದ್ದು , ಈ ಚಿತ್ರದಲ್ಲಿ ರಕ್ತಪಾತ, ಹಿಂಸೆಯನ್ನು ತೋರಿಸಿದ್ದಾರೆ. ‘ಕೆಜಿಎಫ್’ ಹೆಸರಿಗೆ ದಕ್ಕೆ ಉಂಟಾಗಿದೆ ಎಂದು ರತನ್ ಮತ್ತು ಲೋಹಿತ್ ಎಂಬುವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಯಶ್ ಅಭಿನಯದ ಚಿತ್ರ ‘ಕೆಜಿಎಫ್’ ಹೆಸರು ಬದಲಾಯಿಸಿ ಸಿನಿಮಾ ರಿಲೀಸ್ ಮಾಡಿ ಎಂದು ಕೋರಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಕೆಜಿಎಫ್ ಗೆ ಇದೊಂದು ದೊಡ್ಡ ಶಾಕ್. ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಮಾಡಲು ಹೊರಟ ‘ಕೆಜಿಎಫ್’ ಬಿಡುಗಡೆಗೆ ತಡೆ ಬಂದಿರುವ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಎಲ್ಲ ಕಡೆ ಟಿಕೇಟ್ ಈಗಾಗಲೇ ಮಾರಾಟ ವಾಗಿದ್ದು, 3000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ‘ ಕೆಜಿಎಫ್’ ಗೆ ಇದೊಂದು ದೊಡ್ಡ ಕಟಂಕವಾಗಿದೆ. ಜನವರಿ 7, 2019ರ ತನಕ ಚಿತ್ರದ ಬಿಡುಗಡೆಗೆ ತಡೆ ನೀಡಲಾಗಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.