
ಚೂರಿಕಟ್ಟೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ
ಮೂಡಿಸಿರುವ ನಿರ್ದೇಶಕ ರಾಘು ಶಿವಮೊಗ್ಗ ಅವರು ಮುಂದಿನ
ಚಿತ್ರದ ತಯಾರಿಯಲ್ಲಿದ್ದಾರೆ. ಹೊಸ ವರ್ಷದಲ್ಲಿ ಚಿತ್ರ ಶುರುವಾಗಲಿದೆ.
ಅಂದ ಹಾಗೆ ಅವರ ಹೊಸ ಚಿತ್ರದಲ್ಲಿ ಚಿತ್ರದಲ್ಲಿ ದುನಿಯಾ ವಿಜಯ್
ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಕುರಿತು ತಮ್ಮ
ಫೇಸ್ ಬುಕ್ ನಲ್ಲಿ ದುನಿಯಾ ವಿಜಯ್ ಅವರು ಹಾಕಿಕೊಂಡಿದ್ದಾರೆ.
ಈ ಚಿತ್ರದಲ್ಲಿ ವಿಜಯ್ ಅವರು ವಿಭಿನ್ನವಾದ ಪಾತ್ರವೊಂದರಲ್ಲಿ
ಕಾಣಿಸಿಕೊಳ್ಳಲಿದ್ದು ಹೊಸವರ್ಷದ ಮೊದಲದಿನ ಈ ಪಾತ್ರದ ಫಸ್ಟ್ ಲುಕ್
ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ.









