flixOye
Buzz

ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿರುವ ಚೆಲುವೆ ಮೇಘಶ್ರೀ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ‘ಬಿಗ್ ಬಾಸ್ ಸೀಸನ್ 6’ ರಲ್ಲಿ ಪ್ರಥಮ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಪ್ರವೇಶಿಸುತ್ತಿರುವ ಮೇಘಶ್ರೀ ತೀರ್ಥಹಳ್ಳಿ ಮೂಲದವರು. ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದು ತೆಲುಗು ಚಿತ್ರದ ಮೂಲಕ ‘ಪಂಚಮುಖಿ’ ‘ಖಾಕಿ’ , ‘ಓ ಮೈ ಗಾಡ್’, ‘ಆನಗನಗ ಒಕ ಚಿತ್ರಮು’ ಇದು ಮೇಘಶ್ರೀ ನಟಿಸಿದ ತೆಲುಗು ಸಿನಿಮಾಗಳು. ನಂತರ ಕನ್ನಡದಲ್ಲಿ ಕೋಡ್ಲು ರಾಮಕೃಷ್ಣ ನಿರ್ದೇಶನದ ‘ ಮಾರ್ಚ್22’ , ಸಂಚಾರಿ ವಿಜಯ್ ನಾಯಕನಾಗಿ‌ ಅಭಿನಯಿಸಿದ ‘ಕೃಷ್ಣ ತುಳಸಿ’ ಈಗಾಗಲೇ ಬಿಡುಗಡೆಯಾಗಿದೆ.

ವಿಜಯ್ ಸೂರ್ಯ ಜೊತೆ ‘ಕದ್ದು ಮುಚ್ವಿ’ , ಚಿರಂಜೀವಿ ಜೊತೆ ‘ಮಾರ್ತಾಂಡ’ , ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಮಗಳ ಪಾತ್ರದಲ್ಲಿ ನಟಿಸಿದ ‘ದಶರಥ’ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿ‌ರುವ ಮೇಘಶ್ರೀ ಯಶಸ್ ಸೂರ್ಯ ನಾಯಕನಾಗಿ ದ್ವಿಭಾಷೆಯಲ್ಲಿ ಮೂಡಿ ಬರುತ್ತಿರುವ ‘ಅಮೃತವರ್ಷಿಣಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮಾತ್ರವಲ್ಲದೆ ತಮಿಳು ಚಿತ್ರದಲ್ಲೂ ನಟಿಸಿದ್ದಾರೆ.

ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ‘ನಾಗಕನ್ನಿಕೆ’ ಸೀರಿಯಲ್ ನಲ್ಲಿ ಶೇಷ ನಾಗ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಯಾರು ಬಿಗ್ ಬಾಸ್ ಮನೆ ಒಳ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇವತ್ತಿನ ಸಂಚಿಕೆಯಲ್ಲಿ ಮೇಘಶ್ರೀ ಎಂಟ್ರಿ ಕೊಡಲಿದ್ದಾರೆ.

ಸಂಬಂಧಿತ · Related