
ಬಾಲ್ಯದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯದಲ್ಲೇ ಹಸೆಮಣೆ ಏರಲಿರುವ ಧ್ರುವಸರ್ಜಾ ಆಂಜನೇಯನ ಪರಮ ಭಕ್ತನಾಗಿರುವುದರಿಂದ ತಮ್ಮ ಇಚ್ಛೆಯಂತೆ ಆಂಜನೇಯನ ಸನ್ನಿಧಿಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡರು. ಧ್ರುವ ಸರ್ಜಾ ಮಾತ್ರವಲ್ಲ ಪ್ರೇರಣಾ ಕೂಡ ದೈವ ಭಕ್ತರು ನಿಶ್ಚಿತಾರ್ಥ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಧ್ರುವಸರ್ಜಾಗೆ ಶಿವ, ಪಾರ್ವತಿ,ಗಣಪತಿ, ನಂದಿ ಇರುವಂತಹ ಬಂಗಾರದ ಉಂಗುರವನ್ನು ತೊಡಿಸಿದ್ದಾರೆ.

ಧ್ರುವ ಸರ್ಜಾ ಕೂಡ 24 ಲಕ್ಷದ ದುಬಾರಿ ಬೆಲೆಯ ವಜ್ರದುಂಗುರವನ್ನು ಪ್ರೇರಣಾಗೆ ತೊಡಿಸಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ನೇತ್ರತ್ವದಲ್ಲಿ ನಿರ್ಮಾಣವಾದ ವೇದಿಕೆಯಲ್ಲಿ ಧ್ರುವ ಮತ್ತು ಪ್ರೇರಣಾ ಪರಸ್ಪರ ಉಂಗುರವನ್ನು ಬದಲಾಯಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರು ಭಾಗವಹಿಸಿ ಶುಭಕೋರಿದರು.









