flixOye
Buzz

ಶ್ರುತಿ ಹರಿಹರನ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ನಟ ಅರ್ಜುನ್ ಸರ್ಜಾ

ಶ್ರುತಿ ಹರಿಹರನ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ನಟ ಅರ್ಜುನ್ ಸರ್ಜಾ
ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ಮಾಡಿದರ ಬಗ್ಗೆ ಅರ್ಜುನ್ ಸರ್ಜಾ ಮಾತನಾಡಿದ್ದಾರೆ.

ಈ ರೀತಿ ಆರೋಪ ನನ್ನ ಮೇಲೆ‌ ಯಾಕೆ ಹಾಕುತ್ತಿದ್ದರೆ ನನಗೆ ಗೊತ್ತಿಲ್ಲ. ನನಗೆ ಅವರ ಜೊತೆ ಅಸಭ್ಯವಾಗಿ ವರ್ತಿಸುವ ಅವಶ್ಯಕತೆ ಇಲ್ಲ. ಅಂತಹ ಚೀಫ್ ಮೆಂಟಾಲಿಟಿ ನನ್ನದಲ್ಲ. ನನಗೆ ಈ ವಿಷಯವಾಗಿ ತುಂಬಾನೇ ಬೇಜಾರಾಗಿದೆ. ಮಹಿಳೆಯರ ಮೇಲೆ ನನಗೆ ತುಂಬಾನೇ ಗೌರವವಿದೆ. ಯಾವ ಹೆಣ್ಣಿಗೂ ನಾನು ಅವಮಾನ ಮಾಡಿಲ್ಲ ಮಾಡುವುದು ಇಲ್ಲ. ಶೂಟಿಂಗ್ ನೆಪದಲ್ಲಿ ಮೈ ಮುಟ್ಟುವವನು ನಾನಲ್ಲ. ಇದು ಒಂದೂವರೆ ವರ್ಷದ ಹಿಂದಿನ‌ ಸಿನಿಮಾ.

Advertisement

ಅವರ ಆಕ್ಟಿಂಗ್ ನೋಡಿ ನಿಮ್ಮ ಆ್ಯಕ್ಟಿಂಗ್ ಚೆನ್ನಾಗಿದೆ ಹೇಳಿದೆ. ಆಗ‌ ಅವರು ನಿಮ್ಮ ಜೊತೆ ಇನ್ನೊಂದು‌ ಸಿನಿಮಾ ಮಾಡ್ಬೇಕು ಅಂದಾಗ ಓಕೆ‌ ಮಾಡೋಣ ಅಂದಿದ್ದೆ. ಒಂದೂವರೆ ವರ್ಷದ ನಂತರ ನನ್ನ ಮೇಲೆ ಈ‌ ರೀತಿಯ ಆರೋಪ ಮಾಡಿದ್ದನ್ನು ನೋಡಿ ಶಾಕ್ ಆಯಿತು. ಇದೆಲ್ಲಾ ಇವರು ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ. ಮೀಟೂ ಬಗ್ಗೆ ನನಗೂ ಗೊತ್ತು ಅದ್ರೆ ಅದನ್ನು ಒಳ್ಳೆ ಉದ್ದೇಶಕ್ಕೆ ಉಪಯೋಗಿಸಿ ಅದು ಬಿಟ್ಟು ತಮ್ಮ ಪ್ರಚಾರಕ್ಕೆ‌ ದುರುಪಯೋಗ ಪಡಿಸಿಕೊಳ್ಳಬೇಡಿ. ನನ್ನ ಮೇಲೆ ಸುಳ್ಳು ಆರೋಪ ಮಾಡಿದಕ್ಕೆ ನಾನು ಅವರ ಮೇಲೆ ಕೇಸ್ ಹಾಕುತ್ತೇನೆ ಎಂದು ಅರ್ಜುನ್ ಸರ್ಜಾರವರು ಹೇಳಿದ್ದಾರೆ.

ಸಂಬಂಧಿತ · Related